2032ರ ಒಲಿಂಪಿಕ್ಸ್ ಎಲ್ಲಿ ನಡೆಯುತ್ತೆ ಗೊತ್ತಾ?

masthmagaa.com:

2032ರ ಒಲಿಂಪಿಕ್ಸ್ ಕ್ರೀಡಾಕೂಟವನ್ನ ಆಸ್ಟ್ರೇಲಿಯಾದ ಬ್ರಿಸ್ಬೇನ್​ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಅಂತ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ – IOC ಹೇಳಿದೆ. ಈ ಹಿಂದೆ 2000ನೇ ಇಸವಿಯಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಒಲಿಂಪಿಕ್ಸ್​ ನಡೆದಿತ್ತು. ಇದೀಗ 32 ವರ್ಷಗಳ ಬಳಿಕ ಮತ್ತೆ ಆಸ್ಟ್ರೇಲಿಯಾಗೆ ಆತಿಥ್ಯ ಸಿಕ್ಕಿದೆ. ಅಂದ್ಹಾಗೆ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಒಲಿಂಪಿಕ್ಸ್ ನಡೆಯುತ್ತೆ. 2020ರ ಟೋಕಿಯೋ ಒಲಿಂಪಿಕ್ಸ್ ನಾಡಿದ್ದು ಆರಂಭವಾಗ್ತಿದೆ. 2024ರಲ್ಲಿ ಫ್ರಾನ್ಸ್​ನ ಪ್ಯಾರಿಸ್​ನಲ್ಲಿ ಮತ್ತು 2028ರಲ್ಲಿ ಅಮೆರಿಕದ ಲಾಸ್​ ಏಂಜಲಿಸ್​ನಲ್ಲಿ ಒಲಿಂಪಿಕ್ಸ್ ನಡೆಯಲಿದೆ.

-masthmagaa.com

Contact Us for Advertisement

Leave a Reply