ಮೋದಿ ಮೋಡಿಗೆ ಮರುಳು: ಬಿಜೆಪಿಗೆ ಸೇರಿದ ಯುಪಿಯ ಬಿಎಸ್‌ಪಿ ಸಂಸದ!

masthmagaa.com:

ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಪಕ್ಷದ ಹಾಲಿ ಸಂಸದ ರಿತೇಶ್‌ ಪಾಂಡೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇತ್ತೀಚಿಗಷ್ಟೇ ಪಿಎಂ ಮೋದಿ ವಿರೋಧ ಪಕ್ಷಗಳ ಕೆಲ ಸಂಸದರನ್ನ ಆಹ್ವಾನಿಸಿ ಔತಣಕೂಟ ನೀಡಿದ್ರು. ಅದ್ರಲ್ಲಿ ರಿತೇಶ್‌ ಕೂಡ ಭಾಗಿಯಾಗಿದ್ರು. ಈ ಮೂಲಕ ಕಳೆದ ಲೋಕಸಭೆ ಎಲೆಕ್ಷನ್‌ನಲ್ಲಿ ಯುಪಿಯಲ್ಲಿ ಬಿಜೆಪಿ ಬಿಟ್ರೆ ಗರಿಷ್ಠ 10 ಸಂಸದರನ್ನ ಹೊಂದಿದ್ದ BSP ಇದೀಗ ಡ್ಯಾನಿಶ್‌ ಅಲಿ ಬಳಿಕ ಮತ್ತೊರ್ವ ಸಂಸದರನ್ನ ಕಳ್ಕೊಂಡಿದೆ. ಮತ್ತೊಂದೆಡೆ ಗಾಜಿಪುರ್‌ ಕ್ಷೇತ್ರದ ಬಿಎಸ್‌ಪಿ ಸಂಸದ್‌ ಅಫ್ಜಲ್‌ ಅನ್ಸಾರಿ ಮುಂಬರೊ ಲೋಕಸಭೆ ಎಲೆಕ್ಷನ್‌ಗಾಗಿ ಈಗಾಗ್ಲೇ ಸಮಾಜವಾದಿ ಪಕ್ಷದಿಂದ ಎಂಪಿ ಟಿಕೆಟ್‌ ಪಡೆದಿದ್ದಾರೆ ಅಂತ ವರದಿಯಾಗಿದೆ. ಹೀಗಾಗಿ ಲೋಕಸಭೆ ಎಲೆಕ್ಷನ್‌ನಲ್ಲಿ ಸ್ವತಂತ್ರವಾಗಿ ‍ಕಣಕ್ಕಿಳಿತಿರೊ ಬಿಎಸ್‌ಪಿ ಈಗ ಬ್ಯಾಕ್‌ ಟು ಬ್ಯಾಕ್‌ ಆಘಾತ ಎದುರಿಸ್ತಿದೆ.

ಮತ್ತೊಂದೆಡೆ ಅರುಣಾಚಲ ಪ್ರದೇಶದಲ್ಲಿ ಕೂಡ ವಿವಿಧ ಪಕ್ಷಗಳ ನಾಲ್ವರು ಶಾಸಕರು ಆಡಳಿತರೂಢ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್‌ ಹಾಗೂ ಎನ್‌ಪಿಪಿಯ ತಲಾ ಇಬ್ಬರು ಕಮಲ ಹಿಡಿದಿದ್ದಾರೆ. ಕೆಲ ದಿನಗಳಲ್ಲೇ ಇನ್ನು ಅನೇಕರು ಬಿಜೆಪಿ ಸೇರಲಿದ್ದಾರೆ ಅಂತ ಮಾಹಿತಿ ಲಭ್ಯವಾಗ್ತಿದೆ. ಅಂದ್ಹಾಗೆ ಮುಂಬರೊ ಲೋಕಸಭೆ ಎಲೆಕ್ಷನ್‌ ಜೊತೆಗೆ ವಿಧಾನಸಭೆಗೂ ಅರುಣಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದ್ದು, ಇದೇ ಹೊತ್ತಲ್ಲೆ ಈ ಶಾಸಕರು ಬಿಜೆಪಿ ಸೇರಿದ್ದಾರೆ. ಮತ್ತೊಂದ್‌ ಕಡೆ ಕೊನೆಗೂ ಸೀಟು ಹಂಚಿಕೆ ಇತ್ಯರ್ಥ ಆದ ಬೆನ್ನಲ್ಲೇ ರಾಹುಲ್‌ ಗಾಂಧಿ ನ್ಯಾಯ ಯಾತ್ರೆಯಲ್ಲಿ ಅಖಿಲೇಶ್‌ ಯಾದವ್‌ ಪಾಲ್ಗೊಂಡಿದ್ದಾರೆ.

-masthmagaa.com

Contact Us for Advertisement

Leave a Reply