ಶಿಲ್ಪಾ ಶೆಟ್ಟಿ ಗಂಡ ಅರೆಸ್ಟ್​.. ನೀಲಿಚಿತ್ರ ಮಾಡ್ತಿದ್ರಂತೆ ಈ ಭೂಪ!

masthmagaa.com:

ಶಿಲ್ಪಾ ಶೆಟ್ಟಿ ಗಂಡ, ಉದ್ಯಮಿ ರಾಜ್​​​​ ಕುಂದ್ರಾರನ್ನು 3 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ನಿನ್ನೆಯಷ್ಟೇ ಇವರನ್ನು ಮುಂಬೈ ಪೊಲೀಸರು ನೀಲಿಚಿತ್ರಗಳ ನಿರ್ಮಾಣದ ಆರೋಪದಲ್ಲಿ ಅರೆಸ್ಟ್ ಮಾಡಿದ್ರು. ಇದೇ ಕೇಸ್​ನಲ್ಲಿ ಇವತ್ತು ರ್ಯಾನ್ ಥಾಪ್ರಾರನ್ನ ಕೂಡ ಬಂಧಿಸಲಾಗಿತ್ತು. ಇಬ್ಬರನ್ನೂ ಮುಂಬೈನ ಎಸ್​​ಪ್ಲಾನಡೆ ಕೋರ್ಟ್​​​​ ಮುಂದೆ ಹಾಜರುಪಡಿಸಲಾಗಿತ್ತು. ಇಬ್ಬರನ್ನು ಈಗ 3 ದಿನ ಖಾಕಿ ಕಸ್ಟಡಿಗೆ ಕೊಡಲಾಗಿದೆ. ರಾಜ್​ ಕುಂದ್ರಾ ಹಾಟ್​​ ಶಾಟ್ ಅನ್ನೋ ಆಪ್ ಮೂಲಕ ನೀಲಿಚಿತ್ರಗಳ ಡೀಲ್ ಮಾಡ್ತಿದ್ರು. ಅದಕ್ಕೆ ನಮ್ಮ ಬಳಿ ಸಾಕಷ್ಟು ಸಾಕ್ಷ್ಯಗಳಿವೆ ಅಂತ ಪೊಲೀಸರು ಕೋರ್ಟ್​​ಗೆ ತಿಳಿಸಿದ್ದಾರೆ. ಅಂದಹಾಗೆ ಈ ಕೇಸ್ ನಿನ್ನೆ ಮೊನ್ನೇದಲ್ಲ.. ಫೆಬ್ರವರಿಯಿಂದ ಈ ಕೇಸ್​​​​ ತನಿಖೆ ನಡೆಸ್ತಿದ್ದಾರೆ ಮುಂಬೈ ಪೊಲೀಸರು. ಈವರೆಗೆ 9 ಮಂದಿಯನ್ನು ಅರೆಸ್ಟ್ ಮಾಡಲಾಗಿದ್ದು, ಇತ್ತೀಚೆಗೆ ಉಮೇಶ್ ಕಾಮತ್ ಎಂಬಾತ ಬಲೆಗೆ ಬಿದ್ದಿದ್ದ. ಈತ ಈ ಹಿಂದೆ ರಾಜ್ ಕುಂದ್ರಾ ಪಿಎ ಆಗಿ ಕೆಲಸ ಮಾಡಿದ್ದ. ರಾಜ್​ ಕುಂದ್ರಾ ಕೂಡ ಇದ್ರಲ್ಲಿ ಭಾಗಿಯಾಗಿರೋದ್ರ ಬಗ್ಗೆ ಉಮೇಶ್ ಕಾಮತ್ ಸ್ಪಷ್ಟಪಡಿಸಿದ್ದಾನೆ. ಉಮೇಶ್ ಕಾಮತ್ ಇಲ್ಲಿ ವಿಡಿಯೋಗಳನ್ನು ರೆಡಿ ಮಾಡಿ, ಯುನೈಟೆಡ್ ಕಿಂಗ್​​ಡಮ್ ಮೂಲದ ವಿಯಾನ್​​​ ಸಂಸ್ಥೆಗೆ ಕಳುಹಿಸ್ತಿದ್ದ. ಅಲ್ಲಿಂದ ವಿಡಿಯೋಗಳನ್ನು ಅಪ್​ಲೋಡ್ ಮಾಡಲಾಗ್ತಿತ್ತು. ಆ ಸಂಸ್ಥೆಯಲ್ಲಿ ರಾಜ್ ಕುಂದ್ರಾ ಕೂಡ ಪಾಲುದಾರ ಅಂತ ಮಾಹಿತಿ ಸಿಕ್ಕಿದೆ. ಪ್ರಕರಣದಲ್ಲಿ ಶಿಲ್ಪಾ ಶೆಟ್ಟಿ ಪಾತ್ರದ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ ಅಂತ ಕೂಡ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

-masthmagaa.com

Contact Us for Advertisement

Leave a Reply