ಸರ್ಕಲ್​ ಕಟ್ಟೆಗೆ ಡಿಕ್ಕಿಯಾಗಿ, ಆಕಾಶಕ್ಕೆ ಹಾರಿ, ಕಟ್ಟಡಕ್ಕೆ ಡಿಕ್ಕಿಯಾದ ಕಾರು..!

masthmagaa.com:

ಪೋಲೆಂಡ್​ನಲ್ಲಿ ನಡೆದ ಭಯಾನಕ ಅಪಘಾತವೊಂದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗ್ತಿದೆ. ಪೋಲಿಶ್ ಆಡಳಿತ ಈ ವಿಡಿಯೋವನ್ನು ಫೇಸ್​ಬುಕ್​ನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸಿಲ್ವರ್ ಸುಜುಕಿ ಸ್ವಿಫ್ಟ್ ಕಾರೊಂದು ರಸ್ತೆಯಲ್ಲಿದ್ದ ಸರ್ಕಲ್ ಒಂದಕ್ಕೆ ಡಿಕ್ಕಿ ಹೊಡೆದು, ತುಂಬಾ ಎತ್ತರಕ್ಕೆ ಜಿಗಿದಿದೆ. ಈ ವಿಡಿಯೋವನ್ನು ಮಿಲಿಯನ್​​ಗಟ್ಟಲೆ ಜನ ನೋಡಿದ್ದಾರೆ.

ಡಿಕ್ಕಿ ಹೊಡೆದ ಬಳಿಕ ಪೋಪ್​ ಪ್ರತಿಮೆಯ ಪಕ್ಕದಲ್ಲೇ ಹಾರಿದ ಈ ಕಾರು, ಪಕ್ಕದ ಕಟ್ಟವೊಂದಕ್ಕೆ ಹೋಗಿ ಡಿಕ್ಕಿ ಹೊಡೆದಿದೆ. 41 ವರ್ಷದ ಕಾರು ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ಒಟ್ಟಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.

-masthmagaa.com

https://www.facebook.com/ezgalarmowo/videos/514160705926431/

Contact Us for Advertisement

Leave a Reply