ಯುವತಿಗೆ ಸುಳ್ಳು ಹೇಳಿ ಮದುವೆಯಾದ ಮುಸ್ಲಿಂ ಯುವಕ..! ಆಮೇಲೆ ಆಗಿದ್ದೇನು..?

masthmagaa.com:

ದೆಹಲಿ: ವ್ಯಕ್ತಿಯೊಬ್ಬ ಯುವತಿಗೆ ಸುಳ್ಳು ಹೆಸರು ಹೇಳಿಕೊಂಡು ಮದುವೆಯಾಗಿರೋ ಘಟನೆ ದೆಹಲಿಯ ರೋಹಿಣಿ ನಗರದಲ್ಲಿ ನಡೆದಿದೆ. ಸುಳ್ಳು ಹೇಳಿಕೊಂಡು ಮದುವೆಯಾದ ವ್ಯಕ್ತಿಯನ್ನು ಅಖ್ತರ್ ಎಂದು ಗುರುತಿಸಲಾಗಿದ್ದು, ಪೊಲೀಸರು ಲುಕೌಟ್​ ನೋಟಿಸ್ ಜಾರಿ ಮಾಡಿದ್ದಾರೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು, ಆತನ ತಂದೆ ಇದ್ರಿಸ್​ ಮತ್ತು ಇಬ್ಬರು ಸಹೋದರರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಅಖ್ತರ್ ಮೊದಲಿಗೆ ಸುಳ್ಳು ಹೆಸರು ಹೇಳಿಕೊಂಡು ಯುವತಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ನಂತರ ಆರ್ಯ ಸಮಾಜಕ್ಕೆ ಕರೆದೊಯ್ದು ಮದುವೆಯಾಗಿದ್ದಾನೆ. ಆದ್ರೆ ಮನೆಗೆ ಬಂದ ಬಳಿಕ ಅಖ್ತರ್ ನಿಜವಾದ ಹೆಸರು ಯುವತಿಗೆ ಗೊತ್ತಾಗಿದೆ. ಆಗ ಕೋಪಗೊಂಡ ಯುವತಿ ಅಖ್ತರ್​​ನನ್ನು ಬಿಟ್ಟು ತನ್ನ ತವರು ಮನೆಗೆ ಹೊರಟಿದ್ದಾಳೆ. ಆದ್ರೆ ಈ ವೇಳೆ ಆಕೆಯನ್ನು ತಡೆದ ಅಖ್ತರ್​ ನಿಂದಿಸಿ, ಥಳಿಸಿದ್ದಾನೆ. ನಂತರ ಯುವತಿ ನೆರೆಹೊರೆಯವರ ಸಹಾಯದೊಂದಿಗೆ ಪೊಲೀಸ್ ಸ್ಟೇಷನ್​​​ಗೆ ತೆರಳಿ ದೂರು ನೀಡಿದ್ಧಾಳೆ.

ದೇಶದ ಹಲವು ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಾನೂನು ತರಲು ಹೊರಟಿರುವ ಹೊತ್ತಲ್ಲಿ ಈ ಘಟನೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.

-masthmagaa.com

Contact Us for Advertisement

Leave a Reply