ಏಷ್ಯಾದಲ್ಲಿ ಶುರುವಾಗಿದೆ ಅಪಾಯಕಾರಿ ಶಸ್ತ್ರಾಸ್ತ್ರ ಪೈಪೋಟಿ!

masthmagaa.com:

ದ್ವಿತೀಯ ಯುದ್ಧ ಮತ್ತು ಶೀತಲ ಸಮರದ ವೇಳೆ ಶಸ್ತ್ರಾಸ್ತ್ರ ಪೈಪೋಟಿ ಬಗ್ಗೆ ನೀವೆಲ್ಲಾ ಕೇಳೇ ಇರ್ತೀರಿ. ಇದೀಗ ಏಷ್ಯಾದಲ್ಲಿ ಅಪಾಯಕಾರಿ ಶಸ್ತ್ರಾಸ್ತ್ರ ಪೈಪೋಟಿ ಶುರುವಾಗಿದೆ. ತಜ್ಞರ ಪ್ರಕಾರ ಈವರೆಗೆ ಸೈಡ್​ಲೈನ್ ಆಗಿದ್ದ ಏಷ್ಯಾದ ದೇಶಗಳು ಈ ಭಾಗದಲ್ಲಿ ಅಮೆರಿಕ ಮತ್ತು ಚೀನಾ ಪ್ರಭಾವ ಜಾಸ್ತಿಯಾಗುತ್ತಿರುವ ಹೊತ್ತಲ್ಲೇ ಹೊಸ ಹೊಸ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸ್ತಿವೆ. ಚೀನಾ ಡಿಎಫ್-26 ಎಂಬ ಕ್ಷಿಪಣಿಯನ್ನು ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸ್ತಿದ್ದು, ಇದು 4 ಸಾವಿರ ಕಿಲೋಮೀಟರ್ ದೂರದ ಟಾರ್ಗೆಟ್​​ನ್ನು ಧ್ವಂಸಗೊಳಿಸೋ ತಾಕತ್ತು ಹೊಂದಿದೆ. ಅದೇ ಅಮೆರಿಕ ಕೂಡ ಫೆಸಿಫಿಕ್ ವಲಯದಲ್ಲಿ ಚೀನಾಗೆ ಟಕ್ಕರ್ ಕೊಡೋಕೆ ಹೊಸ ಹೊಸ ಅತ್ಯಾಧುನಿಕ ಅಸ್ತ್ರಗಳನ್ನು ಅಭಿವೃದ್ಧಿಪಡಿಸ್ತಿವೆ. ಈ ಭಾಗದ ಉಳಿದ ದೇಶಗಳು ಚೀನಾದ ಹೆಚ್ಚುತ್ತಿರುವ ಪ್ರಭಾವವನ್ನು ಎದುರಿಸಲು ಮತ್ತು ಅಮೆರಿಕದ ಮೇಲಿನ ಅವಲಂಬನೆಯನ್ನು ತಗ್ಗಿಸಲು ಬೇರೆ ಬೇರೆ ದೇಶಗಳಿಂದ ಶಸ್ತ್ರಾಸ್ತ್ರ ಖರೀದಿಸಿ ಸಂಗ್ರಹಿಸ್ತಿವೆ. ಕೆಲವು ದೇಶಗಳು ತಮ್ಮದೇ ಆದ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸ್ತಿವೆ. ಈ ದಶಕ ಕಳೆಯೋ ಮುನ್ನ ಏಷ್ಯಾದ ದೇಶಗಳು ರಾಶಿ ರಾಶಿ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಿವೆ. ಇವುಗಳು ವೇಗವಾಗಿ ಹಾರುವ, ವಿದ್ವಂಸಕಾರಿ ಮತ್ತು ಹಿಂದೆಂದಿಗಿಂತಲೂ ಅತ್ಯಾಧುನಿಕವಾಗಿ ಇರಲಿವೆ. ಇಲ್ಲಿ ಕ್ಷಿಪಣಿಗಳ ಚಿತ್ರಣ ನಿಂತರವಾಗಿ ಮತ್ತು ವೇಗವಾಗಿ ಬದಲಾಗ್ತಾ ಇದೆ ಅಂತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೆಲ ದೇಶಗಳು ಈ ರೀತಿಯ ಶಸ್ತ್ರಾಸ್ತ್ರಗಳನ್ನು ಹೊಂದಿದಾಗ ಅದ್ರ ನೆರೆಹೊರೆಯ ದೇಶಗಳು ಹಿಂದೆ ಉಳಿಯಲು ಬಯಸೋದಿಲ್ಲ. ಅವುಗಳು ಕೂಡ ಶಸ್ತ್ರಾಸ್ತ್ರ ಅಭಿವೃದ್ಧಿಪಡಿಸುತ್ತವೆ. ಒಂದು ವೇಳೆ ಅಭಿವೃದ್ಧಿಪಡಿಸಲು ಸಾಧ್ಯವಾಗದೇ ಇದ್ರೆ ಬೇರೆ ದೇಶಗಳಿಂದ ಖರೀದಿಸುತ್ತವೆ. ಇದ್ರಿಂದ ಶತ್ರುಗಳನ್ನು ತಡೆಯೋದು, ಮಿತ್ರರಾಷ್ಟ್ರಗಳೊಂದಿಗೆ ಮಿತೃತ್ವ ಹೆಚ್ಚಿಸಲು ಸಾಧ್ಯವಾಗುತ್ತೆ. ಕೆಲ ಪ್ರದೇಶಗಳಲ್ಲಿ ಇಂಥಾ ಶಸ್ತ್ರಾಸ್ತ್ರಗಳು ಸಂಘರ್ಷವನ್ನು ತಡೆಯಲು ಮತ್ತು ಶಾಂತಿಯನ್ನು ಸ್ಥಾಪಿಸುವಲ್ಲಿಯೂ ಹೆಲ್ಪ್ ಆಗುತ್ತವೆ. ಆದ್ರೆ ಕ್ಷಿಪಣಿಗಳ ಅಭಿವೃದ್ಧಿಯಿಂದ ಕೆಟ್ಟದ್ದೂ ಇದೆ. ಇದು ಮೊದಲಿಗೆ ದೇಶಗಳ ನಡುವೆ ಅನುಮಾನ ಹುಟ್ಟುಹಾಕುತ್ತೆ. ಆಮೇಲೆ ಶಸ್ತ್ರಾಸ್ತ್ರ ಪೈಪೋಟಿ, ಸಂಘರ್ಷ ಮತ್ತು ಅಂತಿಮವಾಗಿ ಯುದ್ಧಕ್ಕೂ ಕಾರಣವಾಗಬಹುದು ಅಂತ ಕೂಡ ತಜ್ಞರು ಎಚ್ಚರಿಸಿದ್ದಾರೆ.
-masthmagaa.com

Contact Us for Advertisement

Leave a Reply