ರಾಜ್ಯಗಳಿಗೆ ತೆರಿಗೆ ಹಂಚಿಕೆ ಮಾಡಿದ ಕೇಂದ್ರ, ಉತ್ತರ ಪ್ರದೇಶಕ್ಕೆ 21 ಸಾವಿರ ಕೋಟಿ, ಕರ್ನಾಟಕಕ್ಕೆ 4 ಸಾವಿರ ಕೋಟಿ!

masthmagaa.com:

ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆಯ 3ನೇ ಕಂತಾಗಿ 1,18,280 ಕೋಟಿ ರುಪಾಯಿ ಹಣವನ್ನ ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ಮಾಸಿಕವಾಗಿ 59,140 ಕೋಟಿ ಬಿಡುಗಡೆ ಮಾಡಲಾಗ್ತಿತ್ತು, ಆದ್ರೆ ಬಂಡವಾಳ ವೆಚ್ಚವನ್ನ ವೇಗಗೊಳಿಸಲು ಅಭಿವೃದ್ಧಿ, ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಹಾಗು ಆದ್ಯತೆಯ ಯೋಜನೆಗಳಿಗೆ ಸಂಪನ್ಮೂಲ ಒದಗಿಸಲು ಜೂನ್‌ 2023ರ ಬಾಕಿ ಕಂತಿನ ಜೊತಗೆ ಒಂದು ಮುಂಗಡ ಕಂತನ್ನ ರಾಜ್ಯಗಳಿಗೆ ಬಿಡುಗಡೆ ಮಾಡಲಾಗ್ತಿದೆ ಅಂತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಂಚಿಕೆ ಪ್ರಕಾರ ಉತ್ತರಪ್ರದೇಶಕ್ಕೆ ಅತಿಹೆಚ್ಚು 21,218 ಕೋಟಿ ಸಿಕ್ರೆ ಬಿಹಾರಕ್ಕೆ 11,897 ಕೋಟಿ ಸಿಕ್ಕಿದೆ. ಇನ್ನು ನಮ್ಮ ಕರ್ನಾಟಕಕ್ಕೆ 4,314 ಕೋಟಿ ನೀಡಲಾಗಿದೆ. ಅಂದ್ಹಾಗೆ ರಾಜ್ಯಗಳಿಗೆ ಈ GST ತೆರಿಗೆ ಹಂಚಿಕೆ ಹೇಗಾಗುತ್ತೆ, ಯಾವ್ಯಾವ ರಾಜ್ಯಗಳಿಗೆ ಎಷ್ಟು ಹೋಗ್ಬೇಕು, ಅದನ್ನ ಯಾವ ಮಾನದಂಡದ ಮೇಲೆ ಡಿಸೈಡ್‌ ಮಾಡ್ತಾರೆ ಅನ್ನೋದ್ರ ಬಗ್ಗೆ ಈಗಾಗಲೇ ನಾವು ವರದಿ ಮಾಡಿದ್ದೀವಿ. ನೀವದನ್ನ ಚೆಕ್‌ ಮಾಡ್ಬಹುದು.

-masthmagaa.com

Contact Us for Advertisement

Leave a Reply