ಬಂತು ಹೊಸ ವ್ಯಾಕ್ಸಿನ್ ರೂಲ್ಸ್​! ಗೈಡ್​​ಲೈನ್ಸ್​​ನಲ್ಲಿ ಏನೇನಿದೆ ಗೊತ್ತಾ?

masthmagaa.com:

ಲಸಿಕೆ ಅಭಿಯಾನಕ್ಕೆ ಹೊಸ ಮಾರ್ಗಸೂಚಿ ಬಿಡುಗಡೆಯಾಗಿದೆ. ಪ್ರಧಾನಿ ಮೋದಿ ಜೂನ್ 21 ರಿಂದ ಉಚಿತ ಲಸಿಕೆ ಅಭಿಯಾನವನ್ನ ಮತ್ತೆ ಪೂರ್ಣವಾಗಿ ಕೇಂದ್ರ ಸರ್ಕಾರವೇ ಹೊತ್ತುಕೊಳ್ಳುತ್ತೆ ಅಂತ ಘೋಷಿಸಿದ ಬೆನ್ನಲ್ಲೇ ಈ ಮಾರ್ಗಸೂಚಿ ಪ್ರಕಟವಾಗಿದೆ. ಆಯಾ ರಾಜ್ಯಗಳ ಜನಸಂಖ್ಯೆ ಮತ್ತು ಕಾಯಿಲೆ ಪ್ರಮಾಣ ಮತ್ತು ಇದುವರೆಗೂ ಎಷ್ಟು ಲಸಿಕೆ ಅಭಿಯಾನ ನಡೆದಿದೆ ಅನ್ನೋ ಆಧಾರದ ಮೇಲೆ ಲಸಿಕೆಗಳ ಹಂಚಿಕೆ ನಡೆಯುತ್ತೆ. ಲಸಿಕೆ ವೇಸ್ಟೇಜ್ ಆಗದಂತೆ ನೋಡಿಕೊಳ್ಳಬೇಕು ಅಂತ ಹೇಳಲಾಗಿದೆ. ಜೊತೆಗೆ ದೇಶದಲ್ಲಿ ಉತ್ಪಾದನೆಯಯಾಗೋ ಲಸಿಕೆಗಳ ಪೈಕಿ 75 ಪರ್ಸೆಂಟ್​​ ಅನ್ನ ಕೇಂದ್ರ ಸರ್ಕಾರ ಖರೀದಿ ಮಾಡಿ ಫ್ರೀ ಹಂಚಿಕೆ ಮಾಡುತ್ತೆ. ಉಳಿದ 25 ಪರ್ಸೆಂಟ್ ಓಪನ್ ಮಾರ್ಕೆಟ್ ನಲ್ಲಿ ಮಾರಲು ಅವಕಾಶ ಇರುತ್ತೆ. ಇದನ್ನ ಖಾಸಗಿ ಆ್ಪತ್ರೆಗಳು ಖರೀದಿ ಮಾಡಿ ಮಾರಬಹುದು. ಆದ್ರೆ ಓಪನ್ ಮಾರ್ಕೆಟ್ ನಲ್ಲಿ ಲಸಿಕೆ ರೇಟನ್ನ ಲಸಿಕಕೆ ಉತ್ಪಾದಕರೇ ನಿರ್ಧಾರ ಮಾಡ್ತಾರೆ. ಖಾಸಗಿ ಆಸ್ಪತ್ರೆಗಳು ಆ ರೇಟಿನ ಮೇಲೆ ಗರಿಷ್ಠ 150 ರೂಪಾಯಿ ಮಾತ್ರ ಸರ್ವಿಸ್ ಚಾರ್ಜ್ ಕಲೆಕ್ಟ್ ಮಾಡಿಕೊಳ್ಳಬಹುದು ಅಂತ ಗೈಡ್ ಲೈನ್ಸ್ ಹೇಳ್ತಿದೆ. ಬಡವರರಿರಲಿ-ಶ್ರೀಮಂತರಿರಲಿ ಎಲ್ಲರಿಗೂ ಫ್ರೀ ಲಸಿಕೆ ಅಂತೂ ಇದ್ದೆ ಇರುತ್ತೆ. ಆದ್ರೆ ಆರ್ಥಿಕವಾಗಿ ಶಕ್ತಿ ಇದ್ದವರು ಪೇಯ್ಡ್ ಲಸಿಕೆಗಳನ್ನ ಪಡೆದುಕೊಳ್ಳಲು ಪ್ರೋತ್ಸಾಹಿಸಬೇಕು ಅಂತ ಹೇಳಿದ್ದಾರೆ. ಉಳಿದಂತೆ ಆಲ್ಮೋಸ್ಟ್ ನಿನ್ನೆ ಪ್ರಧಾನಿ ಭಾಷಣದಲ್ಲಿದ್ದ ಅಂಶಗಳೇ ಇವೆ.

-masthmagaa.com

Contact Us for Advertisement

Leave a Reply