ಅಫ್ಘಾನಿಸ್ತಾನ ಬಿಕ್ಕಟ್ಟು ಸಂಬಂಧ ಭಾರತದಲ್ಲಿ ಸರ್ವಪಕ್ಷ ಸಭೆ! ಯಾಕೆ?

masthmagaa.com:

ಅಫ್ಘಾನಿಸ್ತಾನ ಬಿಕ್ಕಟ್ಟಿನ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನಾಡಿದ್ದು ಗುರುವಾರ ಸರ್ವಪಕ್ಷ ಸಭೆ ಕರೆದಿದ್ದಾರೆ. ತಾಲಿಬಾನ್​ ಕಂಟ್ರೋಲ್ ಬಳಿಕ ಅಲ್ಲಿನ ಸ್ಥಿತಿಗತಿ ಹೇಗಿದೆ ಅಂತ ಎಲ್ಲಾ ಪಕ್ಷದ ನಾಯಕರಿಗೆ ವಿವರಿಸುವಂತೆ ವಿದೇಶಾಂಗ ಇಲಾಖೆಗೆ ಪ್ರಧಾನಿ ಮೋದಿ ಸೂಚಿಸಿದ್ದಾರೆ ಅಂತ ವಿದೇಶಾಂಗ ಸಚಿವ ಎಸ್​.ಜೈಶಂಕರ್ ಟ್ವೀಟ್ ಮಾಡಿದ್ದಾರೆ. ಅದಕ್ಕೆ ಮರು ಟ್ವೀಟ್ ಮಾಡಿರೋ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ವಿಪಕ್ಷ ನಾಯಕರಿಗೆ ಪ್ರಧಾನಿ ಮೋದಿ ಯಾಕೆ ವಿವರಿಸಬಾರದು.. ಅಥವಾ ಅಫ್ಘಾನಿಸ್ತಾನದಲ್ಲಿ ಏನ್ ನಡೀತಿದೆ ಅನ್ನೋದು ಪ್ರಧಾನಿ ಮೋದಿಗೆ ಗೊತ್ತೇ ಇಲ್ವಾ ಅಂತ ಪ್ರಶ್ನಿಸಿದ್ದಾರೆ.

ಭಾರತ ಅಫ್ಘಾನಿಸ್ತಾನದಲ್ಲಿ ಸಿಲುಕಿರುವವರನ್ನು ನಿರಂತರವಾಗಿ ಕರ್ಕೊಂಡು ಬರ್ತಿದೆ. ದಿನಕ್ಕೆ 2 ವಿಮಾನಗಳ ಮೂಲಕ ಆಪರೇಟ್ ಮಾಡಲು ಅವಕಾಶ ನೀಡಲಾಗಿದೆ. ಮತ್ತೊಂದ್ಕಡೆ ಕಾಬೂಲ್​ನಿಂದ ದೋಹಾಗೆ ಸ್ಥಳಾಂತರಿಸ್ಪಟ್ಟಿದ್ದ 146 ಮಂದಿಯನ್ನು, 4 ವಿಶೇಷ ವಿಮಾನಗಳಲ್ಲಿ ಭಾರತ ಕರ್ಕೊಂಡು ಬಂದಿದೆ. ನಿನ್ನೆ ಒಂದೇ ದಿನ ಕತಾರ್​ನ ದೋಹಾ ಮತ್ತು ತಜಕಿಸ್ತಾನದ ದುಶಾನ್ಬೆಯಿಂದ 392 ಮಂದಿಯನ್ನು ಕರ್ಕೊಂಡು ಬರಲಾಗಿತ್ತು.

ಇವತ್ತು ಭಾರತಕ್ಕೆ ಬಂದವರಲ್ಲಿ ಒಬ್ಬರಾದ 30 ವರ್ಷದ ಜೀತ್ ಬಹದೂರ್ ಥಾಪಾ, ಕರಾಳ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ತಾಲಿಬಾನಿಗಳ ಭಯದಲ್ಲಿದ್ದ ನಮ್ಮನ್ನು ಅಡ್ಡಗಟ್ಟಿದ ದರೋಡೆಕೋರರು 1 ಲಕ್ಷ ರೂಪಾಯಿ ದುಡ್ಡು ಮತ್ತು ಇತರೆ ವಸ್ತುಗಳನ್ನು ದೋಚಿದ್ರು. ಆಮೇಲೆ ಕಾಬೂಲ್ ಏರ್​ಪೋರ್ಟ್​​ಗೆ ಬಂದಾಗ ತಾಲಿಬಾನಿಗಳು ಬಲವಂತವಾಗಿ ನಮ್ಮನ್ನು 5 ಗಂಟೆಗಳ ಕಾಲ ನೆಲದಲ್ಲಿ ಕೂರಿಸಿದ್ರು. ಆಗ ಯಾವುದೇ ಕ್ಷಣದಲ್ಲಿ ತಾಲಿಬಾನಿಗಳು ನಮ್ಮನ್ನು ಕೊಲ್ಲಬಹುದು ಅಂತ ಹೆದರಿಕೊಳ್ಳುತ್ತಲೇ ಇದ್ವಿ ಅಂತ ಹೇಳಿದ್ದಾರೆ.

ಅಫ್ಘಾನಿಸ್ತಾನದಿಂದ ನಿರಾಶ್ರಿತರನ್ನು ಕರೆತರುತ್ತಿರುವ ಭಾರತಕ್ಕೆ ಹೊಸ ಸವಾಲು ಎದುರಾಗೋ ರೀತಿ ಕಾಣ್ತಾ ಇದೆ. ಯಾಕಂದ್ರೆ ಇವತ್ತು ಬಂದ 146 ಮಂದಿಯಲ್ಲಿ ಇಬ್ಬರಲ್ಲಿ ಕೊರೋನಾ ಪತ್ತೆಯಾಗಿದೆ.

ಅಫ್ಘಾನಿಸ್ತಾನದ ನಿರಾಶ್ರಿತರು ಇವತ್ತು ದೆಹಲಿಯಲ್ಲಿರೋ ವಿಶ್ವಸಂಸ್ಥೆಯ ವಲಸಿಗರಿಗೆ ಸಂಬಂಧಿಸಿದ ಯುಎನ್​​​​​​ಹೆಚ್​​ಸಿಆರ್​​ ಕಚೇರಿ ಮುಂದೆ ಪ್ರತಿಭಟಿಸಿದ್ರು. ಭಾರತದಲ್ಲಿ ಸದ್ಯ 21 ಸಾವಿರ ಮಂದಿ ಅಫ್ಘನ್ ವಲಸಿಗರಿದ್ದೀವಿ. ಸದ್ಯದ ಪರಿಸ್ಥಿತಿಯಲ್ಲಿ ನಾವು ವಾಪಸ್ ಹೋಗೋಕೆ ಸಾಧ್ಯವಿಲ್ಲ. ಹೀಗಾಗಿ ನಮಗೆ ರೆಫ್ಯೂಜಿ ಕಾರ್ಡ್ ನೀಡಬೇಕು. ಭದ್ರತೆ ನೀಡಬೇಕು. ಮೂರನೇ ದೇಶವೊಂದ್ರಲ್ಲಿ ಪುನರ್​ವಸತಿಗೆ ಅವಕಾಶ ಮಾಡಿಕೊಡಬೇಕು ಅಂತ ಒತ್ತಾಯಿಸಿದ್ದಾರೆ.

-masthmagaa.com

Contact Us for Advertisement

Leave a Reply