ಜನವರಿ 10ಕ್ಕೆ ಚಂದ್ರಗ್ರಹಣ.. ಇದರ ಪ್ರಭಾವ ಹೇಗಿರುತ್ತೆ ಗೊತ್ತಾ..?

ಡಿಸೆಂಬರ್ ಕೊನೆಯಲ್ಲಿ ಸೂರ್ಯ ಗ್ರಹಣ ನಡೆದಿದ್ದು, ಇದಾದ 14 ದಿನಗಳಲ್ಲಿ ಚಂದ್ರಗ್ರಹಣ ಸಂಭವಿಸ್ತಿದೆ. ಜನವರಿ 10ರಂದು ರಾತ್ರಿ 10.37ರಿಂದ ಜನವರಿ 11ರ ನುಸಕಿನ ಜಾವ 2.45ರವರೆಗೆ ಈ ಗ್ರಹಣ ಇರಲಿದೆ. ಆದ್ರೆ ಜ್ಯೋತಿಷಿಗಳ ಪ್ರಕಾರ ಗ್ರಹಣದ ಅವಧಿಯಲ್ಲಿ ಮಲಗಬಾರದು. ಆದ್ರೆ ಈ ಬಾರಿ ಚಂದ್ರಗ್ರಹಣ ಆಗ್ತಿರೋದೇ ನಡುರಾತ್ರಿಯಾಗಿರೋದ್ರಿಂದ  ಆ ಸಮಯದಲ್ಲಿ ಎದ್ದಿರಲು ಸಾಧ್ಯವಿಲ್ಲ. ಹೀಗಾಗಿ ರಾತ್ರಿ ಮಲಗುವಾಗ ಬೆಡ್​ರೂಂನಲ್ಲಿ ಒಂದು ತೆಂಗಿನ ಕಾಯಿ ಇಟ್ಟರೆ ಒಳ್ಳೆಯದಾಗುತ್ತೆ. ಇದ್ರಿಂದ ಚಂದ್ರಗ್ರಹಣದ ಪ್ರಭಾವ ಕಡಿಮೆಯಾಗುತ್ತೆ ಅಂತ ಜ್ಯೋತಿಷಿಗಳು ಸಲಹೆ ಕೊಟ್ಟಿದ್ದಾರೆ.

ಈ ಬಾರಿಯ ಚಂದ್ರಗ್ರಹಣ ತುಂಬಾ ಮಹತ್ವದ್ದಾಗಿದ್ದು ಪಂಚಗ್ರಹ ಯೋಗವಿದೆ. ಅಂದ್ರೆ ಸೂರ್ಯ, ಬುಧ, ಗುರು, ಶನಿ ಮತ್ತು ಕೇತು ಗ್ರಹಗಳು ಧನುರಾಶಿಯಲ್ಲಿ ಸಂಧಿಸಲಿವೆ. ಹೀಗೆ 5 ಗ್ರಹಗಳ ಮಿಲನದಿಂದ ರಾಜಕೀಯ ಕ್ಷೇತ್ರದಲ್ಲಿ ಭಾರಿ ತಲ್ಲಣವಾಗುವ ಸಾಧ್ಯತೆ ಇದೆ. ಅಲ್ಲದೇ ಅರಾಜಕತೆಯಂತಹ ಸನ್ನಿವೇಷ ಸೃಷ್ಟಿಯಾಗಬಹುದು ಎಂದು ಜ್ಯೋತಿಷಿಗಳು ಎಚ್ಚರಿಸಿದ್ದಾರೆ. ಈ ಗ್ರಹಣದಿಂದ ಭಾರತ ಮಾತ್ರವಲ್ಲದೇ ಯೂರೋಪ್​, ಆಫ್ರಿಕಾ, ಏಷಿಯಾ ಮತ್ತು ಆಸ್ಟ್ರೇಲಿಯಾದ ಹಲವು ಭಾಗಗಳು ಪ್ರಭಾವಕ್ಕೆ ಒಳಗಾಗೋ ಸಾಧ್ಯತೆ ಇದೆ.

Contact Us for Advertisement

Leave a Reply