ಚಂದ್ರಯಾನ ಯಶಸ್ಸಿನ ಹಿಂದಿನ ಹೀರೋ ಯಾರು ಗೊತ್ತಾ..?

ಚಂದ್ರಯಾನ – 2 ಯಶಸ್ಸಿನ ಅತಿ ದೊಡ್ಡ ಶಕ್ತಿ ಬಾಹುಬಲಿ. ಬಾಹುಬಲಿ ಎಂದರೆ ರಾಜಮೌಳಿಯ ಬಾಹುಬಲಿ ಅಲ್ಲ. ಬದಲಾಗಿ ಈ ಬಾಹುಬಲಿ. ಈ ದೈತ್ಯ ಬಾಹುಬಲಿ. ಇವನ ಹೆಸರು ಜಿಎಎಸ್‍ಎಲ್‍ವಿ ಮಾರ್ಕ್ 3. ಈತ ಇಸ್ರೋದ ಅತಿ ದೊಡ್ಡ ಆಸ್ತಿ. ಭಾರತವನ್ನು ವಿಶ್ವದ ಟಾಪ್ ಸ್ಪೇಸ್ ಪವರ್ ಗಳ ಜೊತೆ ಗುರುತಿಸಿಕೊಳ್ಳುವಂತೆ ಮಾಡಿದ ದೈತ್ಯ ಶಕ್ತಿ ಈ ಬಾಹುಬಲಿ. ಜಿಎಎಸ್‍ಎಲ್‍ವಿ ಮಾರ್ಕ್ ತ್ರೀ.  ಜಿಯೋ ಸಿಂಕ್ರನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್. ಇದು ಇವನ ಅಧಿಕೃತ ಹೆಸರಾದರೂ ಎಲ್ಲರೂ ಇವನನ್ನ ಕರೆಯೋದು ಬಾಹುಬಲಿ ಅಂತ.

ಇಸ್ರೋದ ಈ ಬಾಹುಬಲಿಯ ಸ್ಪೆಶಾಲಿಟಿ ಏನು?
ಇವನು ಇಸ್ರೋದ ಅತ್ಯಂತ ದೊಡ್ಡ ದೈತ್ಯ. ಯಾಕಂದ್ರೆ ಇವನಷ್ಟು ಭಾರಹೊರುವ ಶಕ್ತಿ ಬೇರೆ ಯಾವ ರಾಕೆಟ್‍ಗೂ ಇಲ್ಲ. ಈ ಬಾಹುಬಲಿಯ ತೂಕವೇ 6 ಲಕ್ಷದ 40000 ಕೆಜಿ. ಇದರ ಮೇಲೆ ಇವನು 10000 ಕೆಜಿಯಷ್ಟು ಉಪಗ್ರಹಗಳನ್ನು ಹೊತ್ತು ಸಾಗುವ ತಾಕತ್ತು ಹೊಂದಿದ್ದಾನೆ. ಇವನನ್ನ ಸಾಕೋದು ಒಂಥರಾ ಆನೆ ಸಾಕುವುದು ಅಂತಾರಲ್ಲ ಆ ರೀತಿ. ಒಂದು ಸಲ ಇವನ ಬುಡಕ್ಕೆ ಬೆಂಕಿ ಇಟ್ಟು ಹಾರಿಸಿದರೆ ಇಸ್ರೋಗೆ ಬರುವ ಖರ್ಚು 375 ಕೋಟಿ ರೂಪಾಯಿ. ಉಪಗ್ರಹಗಳು ಮತ್ತು ಇತರ ಖರ್ಚು ಬಿಡಿ. ಬರೀ ಇವನ ಹಾರಾಟಕ್ಕೆ ತಗಲುವ ಖರ್ಚು 375 ಕೋಟಿ ರೂಪಾಯಿ.

ಇವನು  important ಯಾಕೆ?
ಭಾರ ಹೊತ್ತುಕೊಂಡು ಅತ್ಯಂತ ದೂರ ಸಾಗುವ ಇವನ ಶಕ್ತಿಯೇ ಇವನ important ಸಂಗತಿ. ಇವನಿಗೆ ಈ ಶಕ್ತಿ ಬಂದಿರುವುದು ಕ್ರಯೋಜನಿಕ್ ಎಂಜಿನ್ ನಿಂದ. ಲಿಕ್ವಿಡ್ ಹೈಡ್ರೋಜನ್ ಬಳಸಿ ಉರಿಯುವ ಈ ಕ್ರಯೋಜನಿಕ್ ಎಂಜಿನ್ ಅತ್ಯಂತ ಶಕ್ತಿಶಾಲಿ. ನಮ್ಮ ಹೆಮ್ಮೆಯ ಇಸ್ರೋ ಈ ಎಂಜಿನನ್ನ ಸ್ವದೇಶಿಯಾಗಿ ಅಭಿವೃದ್ಧಿಪಡಿಸಿದೆ. ಈ ಎಂಜಿನ್ ಅತ್ಯಂತ ಕಮ್ಮಿ ಇಂಧನ ಬಳಸಿ ಅತಿ ಹೆಚ್ಚು ವೇಗದಲ್ಲಿ ರಾಕೆಟ್ ನುಗ್ಗಲು, ಮತ್ತು ಅತಿ ದೂರ ಸಾಗಲು ಸಹಾಯ ಮಾಡುತ್ತದೆ. ದೂರದ ಕಕ್ಷೆಗೆ ಉಪಗ್ರಹಗಳನ್ನು ಸೇರಿಸಲು, ಚಂದ್ರ ಮಂಗಳ ನಂತಹ ದೂರದ ಬಾಹ್ಯಾಕಾಶ ಪ್ರಯಾಣಕ್ಕೆ ತೆರಳಲು ಈ ಬಾಹುಬಲಿ ಬೇಕೇ ಬೇಕು. ಇದೇ ಕಾರಣಕ್ಕೆ ಚಂದ್ರಯಾನ ಟು ಗೆ ಇದೇ ಬಾಹುಬಲಿಯನ್ನು ಬಳಸಲಾಗಿತ್ತು. ಭಾರತದ ಮುಂದಿನ ಬಾಹ್ಯಕಾಶಕ್ಕೆ ಮಾನವನನ್ನು ಕಳುಹಿಸುವ ಯೋಜನೆಗೂ ಈ ಬಾಹುಬಲಿಯನ್ನೇ ಬಳಸಲಾಗುತ್ತದೆ. ಎಸ್‍ಎಲ್‍ವಿ, ಎಎಸ್‍ಎಲ್‍ವಿ, ಪಿಎಸ್‍ಎಲ್‍ವಿ ನಂತರ ಭಾರತ ಅಭಿವೃದ್ಧಿಪಡಿಸಿರುವ ಅತ್ಯಂತ ಪವರ್ ಫುಲ್ ರಾಕೆಟ್ ಈ ಬಾಹುಬಲಿ ಅಥವಾ ಜಿಎಸ್‍ಎಲ್‍ವಿ ಮಾರ್ಕ್ ತ್ರೀ. ಇಂತಹ ದೈತ್ಯ ರಾಕೆಟ್ ಗಳು ಇರುವುದು ಭಾರತ ಬಿಟ್ಟರೆ ಕೇವಲ ಅಮೆರಿಕ, ರಷ್ಯಾ, ಚೀನಾ, ಜಪಾನ್ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿ ಹತ್ತಿರ ಮಾತ್ರ ಅನ್ನೋದು ನಮಗೆ ಹೆಮ್ಮೆಯ ವಿಚಾರ. ಇನ್ನು ಫ್ರೆಂಡ್ಸ್ ನಮ್ಮ ದೇಶದ ಮುದ್ದಿನ ಕಂದನಾದ ಈ ಬಾಹುಬಲಿ ಬಗ್ಗೆ ನಿಮ್ಮ ಪ್ರೀತಿಯನ್ನು ಕಾಮೆಂಟ್ ಮಾಡಿ ವ್ಯಕ್ತಪಡಿಸಿ. ವಿಜ್ಞಾನದ ಈ ರೋಚಕ ವರದಿಯನ್ನು ಎಲ್ಲರಿಗೂ ಶೇರ್ ಮಾಡಿ.

Contact Us for Advertisement

Leave a Reply