ನಕ್ಸಲರ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಪುಷ್ಮ ನಮನ

masthmagaa.com:

ಛತ್ತೀಸ್​ಗಢದಲ್ಲಿ ಭದ್ರತಾಪಡೆ ಮತ್ತು ನಕ್ಸಲರ ನಡುವೆ ಶನಿವಾರ ನಡೆದ ಗುಂಡಿನ ಕಾಳಗದಲ್ಲಿ ಹುತಾತ್ಮರಾದ ಯೋಧರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಛತ್ತೀಸ್​ಗಢ ಸಿಎಂ ಭೂಪೇಶ್ ಭಗೇಲ್ ಇವತ್ತು ಪುಷ್ಪನಮನ ಸಲ್ಲಿಸಿದ್ರು. ಬಳಿಕ ಅಮಿತ್ ಶಾ ಮತ್ತು ಭೂಪೇಶ್ ಭಗೇಲ್ ದಾಳಿ ಕುರಿತು ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ರು. ಜೊತೆಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿರೋ ಯೋಧರನ್ನ ಭೇಟಿಯಾದ್ರು. ಬಿಜಾಪುರ್​ನ ಸಿಆರ್​ಪಿಎಫ್​ ಕ್ಯಾಂಪ್​ಗೆ ಭೇಟಿ ನೀಡಿ ಸಿಬ್ಬಂದಿಯನ್ನ ಕೂಡ ಭೇಟಿಯಾದ್ರು.

ನಂತರ ಮಾತನಾಡಿದ ಅಮಿತ್ ಶಾ, ಈ ಘಟನೆಯ ನಂತರ ನಕ್ಸಲರ ವಿರುದ್ಧದ ನಮ್ಮ ಹೋರಾಟ ಮತ್ತಷ್ಟು ಜಾಸ್ತಿಯಾಗುತ್ತೆ ಅನ್ನೋ ಭರವಸೆಯನ್ನ ದೇಶದ ಜನತೆಗೆ ಕೊಡ್ತೀನಿ ಅಂತ ಹೇಳಿದ್ರು. ಇನ್ನು ನಾಪತ್ತೆಯಾಗಿರೋ ಓರ್ವ ಯೋಧನನ್ನ ನಕ್ಸಲರೇ ಅಪಹರಣ ಮಾಡಿರೋ ಸಾಧ್ಯತೆ ಇದೆ ಅಂತ ಮೂಲಗಳು ತಿಳಿಸಿವೆ. ಮತ್ತೊಂದುಕಡೆ ನಕ್ಸಲರ ಕಡೆಯಲ್ಲೂ ಸಾಕಷ್ಟು ಸಾವು-ನೋವು ಸಂಭವಿಸಿದೆ. ನಕ್ಸಲರ ಮೃತದೇಹಗಳನ್ನ ಮತ್ತು ಗಾಯಗೊಂಡ ನಕ್ಸಲರನ್ನ 4 ಟ್ರಾಕ್ಟರ್ ಟ್ರಾಲಿಗಳಲ್ಲಿ ನಕ್ಸಲರು ತೆಗೆದುಕೊಂಡು ಹೋಗಿರೋ ಬಗ್ಗೆ ಮಾಹಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply