ಭಾರತದೊಂದಿಗಿನ ಗಡಿ ಸಮಸ್ಯೆ ಇತ್ಯರ್ಥವಾಗ್ಬೇಕು ಅಂದ ಚೀನಾ!

masthmagaa.com:

ಚೀನಾ ತನ್ನ ಹಳೇ ರಾಗ ಹಾಡಿದೆ. ಭಾರತದೊಂದಿಗಿನ ಗಡಿ ಸಮಸ್ಯೆ ಚೀನಾ-ಭಾರತ ದ್ವಿಪಕ್ಷೀಯ ಸಂಬಂಧವನ್ನ ಪ್ರತಿನಿಧಿಸೊದಿಲ್ಲ ಅಂತ ಚೀನಾ ಹೇಳಿದೆ. ಉಭಯ ದೇಶಗಳ ಗಡಿ ಸಮಸ್ಯೆ ವಿಚಾರವಾಗಿ ಮನಸ್ತಾಪ ಬಿಟ್ಟು ಎರಡು ದೇಶಗಳು ಪರಸ್ಪರ ನಂಬಿಕೆಯನ್ನ ಹೆಚ್ಚಿಸಿಕೊಳ್ಬೇಕು. ಹೀಗಾಗಿ ಆದಷ್ಟು ಬೇಗ ಗಡಿ ವಿವಾದವನ್ನ ಇತ್ಯರ್ಥ ಗೊಳಿಸಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ವೃದ್ದಿಯಾಗ್ಬೇಕು.. ನಾವಂತು ಇದನ್ನೆ ಬಯಸ್ತೇವೆ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್‌ಬಿನ್‌ ಈ ಹೇಳಿಕೆ ನೀಡಿದ್ದಾರೆ.

-masthmagaa.com

Contact Us for Advertisement

Leave a Reply