USAಗೆ ಹೊಡೆಯಲು ಚೀನಾ ಪ್ರಾಕ್ಟೀಸ್!

masthmagaa.com:

ಅಮೆರಿಕ ಮತ್ತು ಚೀನಾ ನಡುವೆ ನಾನಾ ವಿಚಾರಕ್ಕೆ ಸಂಘರ್ಷ ಮುಂದುವರಿದಿರೋ ನಡುವೆಯೇ ಅಮೆರಿಕ ಜೊತೆಗಿನ ಸಂಭಾವ್ಯ ಯುದ್ಧಕ್ಕೆ ಡ್ರಾಗನ್​ ದೇಶ ರೆಡಿಯಾಗ್ತಿದ್ಯಾ ಅನ್ನೋ ಅನುಮಾನ ಮೂಡಿದೆ. ಹೌದು ಅಂತಿವೆ ಉಪಗ್ರಹಗಳಿಂದ ತೆಗೆದ ಈ ಚಿತ್ರಗಳು. ಇದು ಚೀನಾದ ಷಿನ್​ಜಿಯಾಂಗ್ ಪ್ರಾಂತ್ಯದ ಟಕ್ಲಮಕನ್​ ಮರುಭೂಮಿಯಲ್ಲಿ ಸೆರೆಸಿಕ್ಕ ಚಿತ್ರಗಳು. ಈ ಫೋಟೋಗಳಲ್ಲಿ ಅಮೆರಿಕದ ನೌಕಾಪಡೆಯ ವಿಮಾನವಾಹನ ನೌಕೆಗಳು ಮತ್ತು ಇತರ ಯುದ್ಧನೌಕೆಗಳ ರೀತಿಯ ಮಾಕಪ್ಸ್ ಅಥವಾ ಅಣಕುಗಳು ಕಾಣಿಸಿವೆ. ಇದರಲ್ಲಿ ಅಮೆರಿಕದ ಯುದ್ಧನೌಕೆಯ ಒಂದು ಫುಲ್​ಸ್ಕೇಲ್​ ಅಣಕು ಇದ್ರೆ, ಎರಡು Arleigh Burke-class guided missile destroyers ಇವೆ. ಕೆಲವೊಂದು ಅಣುಕುಗಳು ನೆಲಕ್ಕೆ ಪೇಂಟ್​ ಮಾಡಿರೋಥರ ಇದ್ರೆ, ಇನ್ನೂ ಕೆಲ ಅಣಕುಗಳು ಮರುಭೂಮಿಯಲ್ಲಿ ಚಲಿಸುವಂತೆ ಮಾಡಲು ಅದಕ್ಕೆ ಟ್ರಾಕ್​​ಗಳನ್ನ ರೆಡಿ ಮಾಡಿಕೊಂಡಿದ್ದಾರೆ. ಬಹುಶಃ ಸಂಭಾವ್ಯ ಟಾರ್ಗೆಟ್​​ಗಳ ಬಗ್ಗೆ ತನ್ನ ಯೋಧರಿಗೆ ಚೀನಾ ತರಬೇತಿ ನೀಡ್ತಿರಬಹುದು, ವಿಶೇಷವಾಗಿ ಅಮೆರಿಕದ ವಿಮಾನವಾಹಕ ಯುದ್ಧನೌಕೆಗಳ ವಿರುದ್ಧ ತನ್ನ ಸಾಮರ್ಥ್ಯವನ್ನ ಹೆಚ್ಚಿಸಿಕೊಳ್ಳೋ ಪ್ರಯತ್ನ ಇದಾಗಿಬಹುದು ಅಂತ ಹೇಳಲಾಗ್ತಿದೆ. ಪ್ರಮುಖವಾಗಿ ತೈವಾನ್​ ಮತ್ತು ದಕ್ಷಿಣ ಚೀನಾ ಸಮುದ್ರದ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾ ನಡುವಿನ ಸಂಘರ್ಷ ಮುಗೀತಾ ಇಲ್ಲ. ಇಂಥಾ ಟೈಮಲ್ಲೇ ಅಮೆರಿಕ ವಿರುದ್ಧದ ಸಂಘರ್ಷಕ್ಕೆ ಚೀನಾ ಹಿಂಗೆಲ್ಲಾ ರೆಡಿಯಾಗ್ತಿದ್ಯಾ ಅನ್ನೋ ಅನುಮಾನ ಮೂಡಿಸುವಂತೆ ಮಾಡಿದೆ.

-masthmagaa.com

Contact Us for Advertisement

Leave a Reply