ಸೊಲೋಮನ್‌ ದ್ವೀಪಗಳಲ್ಲಿ ಸೇನಾ ನೆಲೆ ಸ್ಥಾಪಿಸೋ ಯಾವುದೇ ಉದ್ದೇಶವಿಲ್ಲ: ಚೀನಾ

masthmagaa.com:

ಸೊಲೋಮನ್‌ ದ್ವೀಪಗಳಲ್ಲಿ ಸೇನಾ ನೆಲೆಯನ್ನ ಸ್ಥಾಪಿಸೋ ಯಾವುದೇ ಉದ್ದೇಶವಿಲ್ಲ ಅಂತ ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಹೇಳಿದ್ದಾರೆ. ಇದ್ರ ಜೊತೆಗೆ ಸೊಲೋಮನ್‌ ದ್ವೀಪವನ್ನ ಸೇನಾ ನೆಲೆ ಮಾಡ್ಕೊಳ್ಳೋ ಎಲ್ಲಾ ಊಹಾಪೋಹಗಳನ್ನ ಚೀನಾ ತಳ್ಳಿ ಹಾಕಿದೆ. ಪೆಸಿಫಿಕ್ ದ್ವೀಪ ರಾಷ್ಟ್ರಗಳ ಪ್ರವಾಸದ ಭಾಗವಾಗಿ ಸೊಲೋಮನ್‌ ದ್ವೀಪದ ರಾಜಧಾನಿ ಹಾನಿಯಾರಾದಲ್ಲಿರೋ ಚೀನಾ ಸಚಿವ ವಾಂಗ್‌ ಯೀ ಈ ಬಗ್ಗೆ ಸ್ಪಷ್ಟೀಕರಣ ನೀಡಿದ್ದಾರೆ. ಅಂದ್ಹಾಗೆ ಇತ್ತೀಚೆಗೆ ತಾನೇ ಈ ಎರಡು ದೇಶಗಳು ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಿದ್ವು.

-masthmagaa.com

Contact Us for Advertisement

Leave a Reply