ಚೀನಾದಲ್ಲಿ ಪ್ರವಾಹ! ಸಂಕಷ್ಟದಲ್ಲಿ 17.6 ಲಕ್ಷ ಜನ!

masthmagaa.com:

ಉತ್ತರ ಚೀನಾದ ಶಾಂಶಿ ಪ್ರಾಂತ್ಯದಲ್ಲಿ ಭಾರಿ ಮಳೆಯಾಗ್ತಿದ್ದು, ಜನರನ್ನು ಹಿಂಡಿ ಹಿಪ್ಪೆ ಮಾಡ್ತಿದೆ. ಸುಮಾರು 17.6 ಲಕ್ಷ ಜನರ ಜೀವನ ಸಂಕಷ್ಟದಲ್ಲಿ ಸಿಲುಕಿದೆ. 1.20 ಲಕ್ಷ ಜನರನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಆದ್ರೆ 1.89 ಲಕ್ಷ ಹೆಕ್ಟೋರ್ ಪ್ರದೇಶದಲ್ಲಿ ಬೆಳೆದ ಬೆಳೆಯೆಲ್ಲಾ ಪ್ರವಾಹದ ಪಾಲಾಗಿದೆ. 17 ಸಾವಿರ ಮನೆಗಳು ಕುಸಿದು ಬಿದ್ದಿವೆ. ಸಾವು ನೋವಿನ ಬಗ್ಗೆಯೂ ವರದಿಯಾಗಿದ್ದು, ಪಕ್ಕಾ ಲೆಕ್ಕ ಇನ್ನೂ ಸಿಕ್ಕಿಲ್ಲ. ಈ ಹಿಂದೆ ಹೆನಾನ್ ಪ್ರಾಂತ್ಯದಲ್ಲಿ ಪ್ರವಾಹ ಸಂಭವಿಸಿ, 300ಕ್ಕೂ ಹೆಚ್ಚು ಜನ ಪ್ರಾಣ ಕಳ್ಕೊಂಡಿದ್ರು.

-masthmagaa.com

Contact Us for Advertisement

Leave a Reply