ಕೆನಡಾದ ಎರಡು ಚುನಾವಣೆಯಲ್ಲಿ ಚೀನಾ ಹಸ್ತಕ್ಷೇಪ: ಕೆನಡಾ

masthmagaa.com:

ಕೆನಡಾದ 2019 ಮತ್ತು 2021ರ ಜನರಲ್‌ ಎಲೆಕ್ಷನ್‌ನಲ್ಲಿ ಭಾರತ ಹಸ್ತಕ್ಷೇಪ ಮಾಡಿತ್ತು ಅಂತ ಇತ್ತೀಚೆಗಷ್ಟೇ ಕೆನಡಾದ ಬೇಹುಗಾರಿಕಾ ಸಂಸ್ಥೆ ಆರೋಪ ಮಾಡಿತ್ತು. ಆದ್ರೆ ಈಗ ಅದನ್ನ ಮಾಡಿರೋದು ಭಾರತವಲ್ಲ….ಬದಲಾಗಿ ಚೀನಾ ಅಂತ ಹೇಳಿದೆ. ಈ ಬಗ್ಗೆ ಬೇಹುಗಾರಿಕಾ ಸಂಸ್ಥೆ ಬಹಳ ಸ್ಟ್ರಾಂಗ್‌ ಆಗಿರೋ ಎವಿಡೆನ್ಸ್‌ ಕೂಡ ಮುಂದಿಟ್ಟಿದೆ ಅಂತ ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಚೀನಾ ಬಹಳ ರಹಸ್ಯವಾಗಿ ಮತ್ತು ಕುತಂತ್ರದಿಂದ ಕೆನಡಾದ ಎರಡೂ ಎಲೆಕ್ಷನ್‌ನಲ್ಲಿ ಹಸ್ತಕ್ಷೇಪ ಮಾಡಿತ್ತು ಅಂತ ಕೆನಡಾ ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ಕೆನಡಾ ಆಡಳಿತ ಮತ್ತೊಮ್ಮೆ ಪೇಚಿಗೆ ಸಿಲುಕಿದಂತೆ ಆಗಿದೆ. ಯಾಕಂದ್ರೆ ಇದೇ ಬೇಹುಗಾರಿಕೆ ಸಂಸ್ಥೆ ಭಾರತದ ವಿರುದ್ದ ಮತ್ತು ಪಾಕಿಸ್ತಾನದ ವಿರುದ್ದ ಕೂಡ ಆರೋಪ ಮಾಡಿತ್ತು. ಭಾರತ ಇದನ್ನ ಖಂಡಿಸಿತ್ತು. ಈಗ ನೀವಲ್ಲ ಅವರು ಅಂತ ಪ್ಲೇಟ್‌ ಬದಲಾಯಿಸಿದೆ.

-masthmagaa.com

Contact Us for Advertisement

Leave a Reply