ನೈಸರ್ಗಿಕ ಅನಿಲ ಹುಡುಕಾಟದಲ್ಲಿ 10 ಸಾವಿರ ಮೀಟರ್‌ ರಂಧ್ರ ಕೊರೆದ ಚೀನಾ!

masthmagaa.com:

ಭೂಮಿಯ ಆಳದಲ್ಲಿ ನೈಸರ್ಗಿಕ ಅನಿಲಕ್ಕಾಗಿ ಹುಡುಕಾಟ ನಡೆಸ್ತಿರುವ ಚೀನಾ, ಮತ್ತೊಂದು 10 ಸಾವಿರ ಮೀಟರ್ ಉದ್ದದ ರಂಧ್ರ ಕೊರೆಯುವ ಕೆಲಸ ಶುರು ಮಾಡಿದೆ. ಚೀನಾ ರಾಷ್ಟ್ರೀಯ ಪೆಟ್ರೋಲಿಯಂ ನಿಗಮ (CNPC) ಸಿಚುವಾನ್ ಪ್ರಾಂತ್ಯದಲ್ಲಿ 10,520 ಮೀಟರ್ ಆಳದ ‘Shendi Chuanke 1ʼ ಬಾವಿಯನ್ನ ಕೊರೆಯಲು ಪ್ರಾರಂಭಿಸಿದೆ ಅಂತ ತಿಳಿದು ಬಂದಿದೆ. ಇತ್ತೀಚೆಗಷ್ಟೆ CNPC ಕ್ಸಿಂಜಿಯಾಂಗ್‌ನಲ್ಲಿ ಇದೇ ಆಳದ ಭೂಮಿ ಕೊರೆಯುವ ಕಾರ್ಯ ಪ್ರಾರಂಭಿಸಿತ್ತು. ಇದು ಚೀನಾದಲ್ಲೇ ಕೊರೆಯಲಾಗಿರುವ ಅತ್ಯಂತ ಆಳವಾದ ಬಾವಿ ಅಂತ ಹೇಳಲಾಗಿತ್ತು. ಆದ್ರೆ ಇದು ಕೇವಲ ಡ್ರಿಲ್ಲಂಗ್ ತಂತ್ರಜ್ಞಾನಗಳನ್ನ ಟೆಸ್ಟ್‌ ಮಾಡೋಕೆ, ಹಾಗೆ ಭೂಮಿಯ ಆಂತರಿಕ ರಚನೆ ಬಗ್ಗೆ ತಿಳಿದುಕೊಳ್ಳೋಕೆ ಪ್ರಾಯೋಗಿಕವಾಗಿ ಮಾಡಿದ್ದು. ಈಗ ಕೊರಿತಿರೋದು ಪಾತಾಳದಲ್ಲಿರುವ ನೈಸರ್ಗಿಕ ಅನಿಲವನ್ನ ಹೊರತೆಗೆಯೋದಕ್ಕೆ ಅಂತ ಅಲ್ಲಿನ ಮಾಧ್ಯಮಗಳಲ್ಲಿ ವರದಿ ಮಾಡಿವೆ. ಈ ರಂಧ್ರ ಕೊರೆಯೋದಕ್ಕೆ 200 ಡಿಗ್ರೀ ಸೆಲ್ಸಿಯಸ್‌ ತಾಪಮಾನ ಹಾಗು 1300ಪಟ್ಟು ಹೆಚ್ಚಿನ ಅಟ್ಮಾಸ್ಪಿಯರಿಕ್‌ ಪ್ರೆಶರ್‌ನ್ನ ತಡೆಯುವ ಸುಮಾರು 2 ಸಾವಿರ ಟನ್‌ ತೂಕದ ಉಪಕರಣ ಬಳಸಲಾಗ್ತಿದೆ. ಅಂದ್ಹಾಗೆ ಇತ್ತೀಚಿನ ಕೆಲವು ವರ್ಷಗಳಲ್ಲಿ ತೈಲ ಉತ್ಪನ್ನಗಳಿಗೆ ವಿದೇಶಿ ಮೂಲಗಳನ್ನು ಅವಲಂಬಿಸುವುದು ಚೀನಾಕ್ಕೆ ಅನೇಕ ರೀತಿಯಲ್ಲಿ ತಲೆನೋವಾಗಿ ಪರಿಣಮಿಸುತ್ತಿದೆ. ವಿದ್ಯುತ್ ಕೊರತೆಯ ಸಮಸ್ಯೆಗಳು, ಜಾಗತಿಕ ರಾಜಕೀಯ ಬಿಕ್ಕಟ್ಟು ಹಾಗೂ ಬೆಲೆ ಏರಿಕೆಯಂತಹ ಕಾರಣದಿಂದ ತೈಲ ಕೊರತೆ ಫೇಸ್‌ ಮಾಡ್ತಿದೆ. ಹೀಗಾಗಿ ದೇಶೀ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ತೈಲ ಭದ್ರತೆಯನ್ನು ವೃದ್ಧಿಸುವಂತೆ ಚೀನಾ ಸರ್ಕಾರ ಇಂಧನ ಕಂಪೆನಿಗಳ ಮೇಲೆ ವಿಪರೀತ ಒತ್ತಡ ಹೇರುತ್ತಿದೆ. ಈ ಕಾರಣಕ್ಕೆ ನೈಸರ್ಗಿಕ ಅನಿಲ ಸಂಪನ್ಮೂಲದ ಹುಡುಕಾಟದಲ್ಲಿರುವ CNPC, ಭೂಮಿ ಆಳಕ್ಕೆ ಸಾವಿರಾರು ಮೀಟರ್ ರಂಧ್ರ ಕೊರೆಯುತ್ತಿದೆ ಎನ್ನಲಾಗಿದೆ.) ಅಂದ್ಹಾಗೆ ವಾಯುವ್ಯ ರಷ್ಯಾದಲ್ಲಿರುವ 12,262 ಮೀಟರ್‌ ಆಳದ ʻಕೋಲಾ ಸೂಪರ್‌ಡೀಪ್‌ ಬೋರ್‌ಹೋಲ್‌ʼ ಮಾನವ ನಿರ್ಮಿತ ಅತ್ಯಂತ ಆಳದ ಬಾವಿಯಾಗಿದೆ.

-masthmagaa.com

Contact Us for Advertisement

Leave a Reply