18 ತಿಂಗಳ ನಂತರ ಭಾರತಕ್ಕೆ ಚೀನಾದ ಹೊಸ ರಾಯಭಾರಿ!

masthmagaa.com:

ಬರೋಬ್ಬರಿ 18 ತಿಂಗಳ ನಂತ್ರ ಭಾರತಕ್ಕೆ ಚೀನಾ ತನ್ನ ಹೊಸ ರಾಯಭಾರಿಯನ್ನ ನೇಮಿಸಿದೆ. ಚೀನಾದ ರಾಯಭಾರಿಯಾಗಿ ಷು ಫೀಹಾಂಗ್‌ (Xu Feihong) ಅವ್ರನ್ನ ಚೀನಾಧ್ಯಕ್ಷ ಷಿ ಜಿನ್‌ಪಿಂಗ್‌ ನೇಮಿಸಿದ್ದಾರೆ ಅಂತ ವರದಿಯಾಗಿದೆ. ಈ ಬಗ್ಗೆ ಚೀನಾದ ವಿದೇಶಾಂಗ ಸಚಿವಾಲಯದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬರಬೇಕಿದೆ. ಭಾರತ ಮತ್ತು ಚೀನಾ ನಡುವಿನ ದೀರ್ಘಕಾಲದ ಗಡಿ ವಿವಾದ ಬಗೆಹರಿಸಲು ಉಭಯ ದೇಶಗಳು ಮಾತುಕತೆ ನಡೆಸೋ ಬಗ್ಗೆ ಹೇಳಿಕೆ ನೀಡಿರೋ ಬೆನ್ನಲ್ಲೆ ಈ ಬೆಳವಣಿಯಾಗಿದೆ. ಅಂದ್ಹಾಗೆ ಈ ಷು ಫಿಹಾಂಗ್‌ ಈ ಹಿಂದೆ ಅಫ್ಘಾನಿಸ್ತಾನ ಮತ್ತು ರೊಮೇನಿಯಾದಲ್ಲಿ ರಾಯಭಾರಿಯಾಗಿದ್ರು ಅಂತ ಗೊತ್ತಾಗಿದೆ.

-masthmagaa.com

Contact Us for Advertisement

Leave a Reply