ರಾಷ್ಟ್ರೀಯ ಪಠ್ಯಕ್ರಮದಲ್ಲಿ ಕ್ಸಿ ಜಿನ್​ಪಿಂಗ್ ವಿಚಾರಧಾರೆ ಸೇರಿಸಲು ಚೀನಾ ಪ್ಲಾನ್!

masthmagaa.com:

ರಾಷ್ಟ್ರೀಯ ಪಠ್ಯಕ್ರಮದಲ್ಲಿ ಕ್ಸಿ ಜಿನ್​ಪಿಂಗ್ ವಿಚಾರಧಾರೆಗಳನ್ನು ಸೇರಿಸಲು ಚೀನಾ ಸರ್ಕಾರ ಪ್ಲಾನ್ ಮಾಡಿದೆ. ಈ ಮೂಲಕ ಮಾರ್ಕ್ಸಿಸ್ಟ್​ ತತ್ವಗಳನ್ನು ದೇಶದ ಯುವಜನತೆಗೆ ಹರಡೋದು ನಮ್ಮ ಉದ್ದೇಶವಾಗಿದೆ ಅಂತ ಚೀನಾ ಶಿಕ್ಷಣ ಇಲಾಖೆ ತಿಳಿಸಿದೆ. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಹೊಸಯುಗದಲ್ಲಿ ಸಮಾಜವಾದ, ಚೀನಾದ ಗುಣಲಕ್ಷಣಗಳನ್ನು ಹೊಂದಿರೋ ಸಮಾಜವಾದ, ಅದ್ರಲ್ಲೂ ಜಿನ್​​ಪಿಂಗ್​ ವಿಚಾರಧಾರೆಯನ್ನು ಕಲಿಸಿಕೊಡಲಾಗುತ್ತೆ ಅಂತ ಶಿಕ್ಷಣ ಸಚಿವಾಲಯ ತಿಳಿಸಿದೆ. ಅಂದಹಾಗೆ ಚೀನಾದ ಈ ನಿರ್ಧಾರ ಕಮ್ಯೂನಿಸ್ಟ್ ಪಕ್ಷವನ್ನು ಬಲಪಡಿಸುವ ಗುರಿಯನ್ನು ಹೊಂದಿದ್ದು, ಯುವಜನತೆಯಲ್ಲಿ ದೇಶಭಕ್ತಿಯ ಭಾವನೆ ಬೆಳೆಸಬೇಕು ಅಂತ ಮಾರ್ಗಸಚಿಯಲ್ಲಿ ಹೇಳಲಾಗಿದೆ.

-masthmagaa.com

Contact Us for Advertisement

Leave a Reply