ಜಾಕ್​ ಮಾ ಕಂಪನಿ ಮೇಲೆ ಚೀನಾ ‘ದಂಡ’ ಪ್ರಹಾರ!

masthmagaa.com:

ಈ ಕಮ್ಯೂನಿಸ್ಟ್ ದೇಶ ಚೀನಾ ಬ್ಯುಸಿನೆಸ್ ಮ್ಯಾಗ್ನೆಟ್ ಜಾಕ್​ ಮಾ ಮತ್ತವರ ಕಂಪನಿಯನ್ನು ಫುಲ್ ಮಟ್ಟಹಾಕೋವರೆಗೆ ಬಿಡೋ ರೀತಿ ಕಾಣಿಸ್ತಿಲ್ಲ. ಇದೀಗ ಮತ್ತೆ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ವಿರೋಧಿ ನಿಯಮ ಉಲ್ಲಂಘಿಸಿದ ಆರೋಪದಡಿಯಲ್ಲಿ 278 ಕೋಟಿ ಡಾಲರ್ ಅಂದ್ರೆ ಭಾರತದ ರೂಪಾಯಿ ಲೆಕ್ಕದಲ್ಲಿ 20 ಸಾವಿರ ಕೋಟಿ ರೂಪಾಯಿಯಷ್ಟು ದಂಡ ವಿಧಿಸಲಾಗಿದೆ. ಚೀನಾದಲ್ಲಿ ಇದೇ ಮೊದಲ ಬಾರಿಗೆ ಒಂದು ಖಾಸಗಿ ಕಂಪನಿ ಮೇಲೆ ಇಷ್ಟು ದೊಡ್ಡ ಮೊತ್ತದ ದಂಡ ವಿಧಿಸಲಾಗಿದೆ. ಅಲಿಬಾಬಾ ಸಂಸ್ಥೆ ಏಕಸ್ವಾಮ್ಯ ವಿರೋಧಿ ನಿಯಮ ಮಾತ್ರ ಉಲ್ಲಂಘಿಸಿಲ್ಲ.. ಬದಲಾಗಿ ಮಾರುಕಟ್ಟೆಯಲ್ಲಿ ತನಗಿರೋ ಪ್ರಭಾವವನ್ನು ಕೂಡ ದುರುಪಯೋಗ ಪಡಿಸಿಕೊಂಡಿದೆ.

ಹೀಗಾಗಿ ಅಲಿಬಾಬಾ ಸಂಸ್ಥೆ 2019ರಲ್ಲಿ ಗಳಿಸಿದ ಆದಾಯದ ಶೇ.4ರಷ್ಟು ದಂಡ ವಿಧಿಸಿರೋದಾಗಿ ಚೀನಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಸಂಬಂಧ ಚೀನಾದ ಸ್ಟೇಟ್ ಅಡ್ಮಿನಿಸ್ಟ್ರೇಷನ್ ಫಾರ್ ಮಾರ್ಕೆಟ್ ರೆಗ್ಯುಲೇಷನ್ ಕಳೆದ ವರ್ಷ ತನಿಖೆ ಶುರು ಮಾಡಿತ್ತು. ಈಗ ದಂಡ ವಿಧಿಸಿ ಆದೇಶ ನೀಡಿದೆ. ಈ ಬಗ್ಗೆ ಜಾಕ್​ ಮಾ ಆಗಲೀ, ಅವರ ಕಂಪನಿಯಾಗಲೀ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಬದಲಾಗಿ ಆದೇಶವನ್ನು ಸ್ವಾಗತಿಸಿದ್ದು, ದಂಡ ಕಟ್ಟಲು ಒಪ್ಪಿಕೊಂಡಿದೆ. ಕಳೆದ ವರ್ಷ ಜಾಕ್​ ಮಾ ಚೀನಾ ಸರ್ಕಾರದ ಕೆಲವೊಂದು ನೀತಿಗಳ ವಿರುದ್ಧ ಮಾತಾಡಿದ್ರು ಅಷ್ಟೆ.. ಅಲ್ಲಿಂದ ಅವರ ಮೇಲೆ ಚೀನಾ ಸರ್ಕಾರದ ಕೆಂಗಣ್ಣು ಬಿದ್ದಿದ್ದು, ನಿರಂತರವಾಗಿ ತುಳಿಯೋಕೆ ಯತ್ನಿಸುತ್ತಿದೆ.

-masthmagaa.com

Contact Us for Advertisement

Leave a Reply