ತಾಲಿಬಾನಿಗಳಿಗೆ ಚೀನಾ ಕೊಟ್ಟ ವಾರ್ನಿಂಗ್ ಏನು ಗೊತ್ತಾ?

masthmagaa.com:

ತಾಲಿಬಾನಿಗಳು ಅಫ್ಘಾನಿಸ್ತಾವನ್ನು ವಶಕ್ಕೆ ಪಡೆದಿರೋದಕ್ಕೆ ಒಳಗೊಳಗೆ ಅಟ್ಟಹಾಸ ಮಾಡಿ ನಗ್ತಿರೋ ಚೀನಾ, ಈಗ ತಾಲಿಬಾನಿಗಳಿಗೆ ಎಚ್ಚರಿಕೆ ನೀಡಿದೆ. ಅಫ್ಘಾನಿಸ್ತಾನ ಮತ್ತೆ ಭಯೋತ್ಪಾದನೆಯ ನೆಲೆಯಾಗಲು ತಾಲಿಬಾನಿಗಳು ಬಿಡಬಾರದು. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಬೆಂಬಲ ನೀಡಬೇಕು.. ವಿರೋಧಿಗಳನ್ನೆಲ್ಲಾ ಸೇರಿಸಿಕೊಂಡು ಸರ್ಕಾರ ರಚಿಸಬೇಕು ಅಂತ ಹೇಳಿದ್ದಾರೆ. ಹೀಗೆ ಚೀನಾ ಬ್ಯಾಲೆನ್ಸಿಂಗ್ ಹೆಜ್ಜೆ ಇಡ್ತಾ ಇದೆ. ಒಂದು ಕಡೆ ತಾಲಿಬಾನಿಗಳಿಗೆ ಬೆಂಬಲವನ್ನು ಕೊಡ್ತಿದೆ. ಮತ್ತೊಂದ್ಕಡೆ ಎಚ್ಚರಿಕೆಯನ್ನು ಕೊಡ್ತಾ ಇದೆ.

-masthmagaa.com

 

Contact Us for Advertisement

Leave a Reply