ಚೀನಾದಲ್ಲಿ ಬರುತ್ತಾ ಆಧುನಿಕ ಸರ್ವಾಧಿಕಾರ: ಹೊಸ ನಿರ್ಣಯ ಪಾಸ್​!

masthmagaa.com:

ಚೀನಾದಲ್ಲಿ ಈಗ ಶಿ ಜಿನ್‌ಪಿಂಗ್ ಅನ್ನೋ ಆಧುನಿಕ ಸರ್ವಾಧಿಕಾರಿಯ life-time ಪಟ್ಟಾಭಿಷೇಕಕ್ಕೆ ತಯಾರಿ ಆರಂಭವಾಗಿದೆ ಅಂತ ಒಂದು ವಾರದ ಹಿಂದೇನೆ ನಾವು ಸುತ್ತು ಜಗತ್ತಿನಲ್ಲಿ ಮಾಹಿತಿ ನೀಡಿದ್ವಿ. ಈಗ ಚೈನೀಸ್ ಕಮ್ಯುನಿಸ್ಟ್ ಪಾರ್ಟಿಯ ಸೆಂಟ್ರಲ್ ಕಮಿಟಿಯ ಸಭೆ ಬೀಜಿಂಗ್ನಲ್ಲಿ ನಡೆದಿದೆ. 400ಕ್ಕೂ ಅಧಿಕ ಸದಸ್ಯರು ಭಾಗಿಯಾಗಿ ನಿರ್ಣಯ ಪಾಸ್ ಮಾಡಿದ್ದಾರೆ. ನಾಲ್ಕು ದಿನಗಳ ಈ ಸಭೆ ಮುಚ್ಚಿದ ಬಾಗಿಲುಗಳ ಹಿಂದೆ ನಡೆದಿದೆ.‌ ಈ ಸಭೆಯಲ್ಲಿ ಅಂಗೀಕಾರ ಮಾಡಲಾಗಿರೋ ನಿರ್ಣಯದಲ್ಲಿ ಶಿ ಜಿನ್ಪಿಂಗ್ ರನ್ನ ಮಾವೋ ಹಾಗೂ ಡೆಂಗ್ ಶಾವೋಪಿಂಗ್ ಗಿಂತಲೂ ಎತ್ತರದ ಸ್ಥಾನಕ್ಕೆ ಏರಿಸಲಾಗಿದೆ. ಇಡೀ ಡಾಕ್ಯುಮೆಂಟ್ನಲ್ಲಿ ಜಿನ್ಪಿಂಗ್ ವಿಚಾರಧಾರೆಗೆ ಭಾರೀ ಮಹತ್ವ ಕೊಡಲಾಗಿದೆ. ಚೀನಾದ ಇತಿಹಾಸ ಹಾಗೂ ಶಕ್ತಿಯ ಹೃದಯ ಜಿನ್ಪಿಂಗ್ ಅವರ ಯೋಚನೆ ಅಂತ ಹೇಳಲಾಗಿದೆ. ಸಾವಿರಾರು ವರ್ಷಗಳ ಚೀನಾ ಇತಿಹಾಸದಲ್ಲಿ ಚೀನಾ ವನ್ನ ಒಂದು ಗ್ರೇಟ್ ನೇಶನ್ ಮಾಡಿದ್ದು ಕಮ್ಯೂನಿಸ್ಟ್ ಪಾರ್ಟಿ ಬಂದ ಮೇಲೆ. ಈ ಇತಿಹಾಸವನ್ನ ಸರಿಯಾಗಿ ಬರೆಯಬೇಕಾಗಿದೆ ಅಂತಲೂ ಹೇಳಲಾಗಿದೆ. ಇದುವರೆಗೂ ಚೀನಾದ ಇತಿಹಾಸದಲ್ಲಿ ಕೇವಲ ಎರಡು ಬಾರಿ ಮಾತ್ರ ಸೆಂಟ್ರಲ್ ಕಮಿಟಿ ಇಂತಹ ನಿರ್ಣಯಗಳನ್ನು ಅಂಗೀಕರಿಸಿದೆ. ಮೊದಲ ಸಲ ಅಂದರೆ ಅದು 1945 ರಲ್ಲಿ ಮಾವೋರನ್ನ ಸುಪ್ರೀಂ ಲೀಡರ್ ಅಂತ ಘೋಷಿಸಲು. ಎರಡನೇ ಸಲ ಸಾವಿರದ ಒಂಬೈನೂರ 81ರಲ್ಲಿ ಡೆಂಗ್ ಶಾವೋಪಿಂಗ್ ಕಾಲದಲ್ಲಿ ತೆಗೆದುಕೊಂಡ ನಿರ್ಣಯ. ಆಗ ಚೀನಾದಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರಲಾಗಿತ್ತು. ಮಾವೋ ಕಾಲದಲ್ಲಿ ಜಾರಿಯಲ್ಲಿದ್ದ ಆರ್ಥಿಕ ನೀತಿಗಳು ತಪ್ಪು ಅಂತ ಇದರಲ್ಲಿ ಒಪ್ಪಿಕೊಳ್ಳಲಾಗಿತ್ತು. ಈಗ ಮೂರನೇ ಸಲ ಜಿನ್ಪಿಂಗ್ ಅವಧಿಯಲ್ಲಿ ಸೆಂಟ್ರಲ್ ಕಮಿಟಿ ಸಭೆ ಸೇರಿ ರೆಸಲ್ಯೂಷನ್ ಪಾಸ್ ಮಾಡಿದೆ. ಇದರಲ್ಲಿ ಚೀನಾ ಇತಿಹಾಸದಲ್ಲಿ ಜಿನ್ಪಿಂಗ್ ಅವರಿಗೆ ಮಾವೋಗೆ ಸರಿಸಮನಾದ ಸ್ಥಾನವನ್ನು ಕೊಟ್ಟಿದ್ದಾರೆ. ಇಡೀ ರೆಸಲ್ಯೂಶನ್ ನಲ್ಲಿ ಮಾವೋ ಹೆಸರು 7 ಸಲ ಬಂದಿದೆ. ಡೆಂಗ್ ಶಾವೋಪಿಂಗ್ ಹೆಸರು 5 ಸಲ ಬಂದಿದೆ. ಆದ್ರೆ ಜಿನ್ಪಿಂಗ್ ಹೆಸರು 17 ಸಲ ಬಂದಿದೆ. ಸೋ ವಿಚಾರ ಸ್ಪಷ್ಟ. ಈಗಾಗಲೇ ಚೀನಾದಲ್ಲಿ ಪ್ರತಿಯೊಂದರ ಮೇಲೂ ತನ್ನ ಹಿಡಿತವನ್ನು ಸಾಧಿಸಿರುವ ಜಿನ್ಪಿಂಗ್, ಕಮ್ಯುನಿಸ್ಟ್ ಚೀನಾದ ಅತಿದೊಡ್ಡ ಸರ್ವಾಧಿಕಾರಿ ಆಗ್ತಿದ್ದಾರೆ. ಹಾಗೂ ಜಗತ್ತು ಇತ್ತೀಚಿಗೆ ಕಂಡ ಮೋಸ್ಟ್ ಪವರ್ಫುಲ್ ಸರ್ವಾಧಿಕಾರಿ ಆಗ್ತಿದ್ದಾರೆ. ಇದು ಜಗತ್ತಿಗೆ ಮಾತ್ರ ಕೆಟ್ಟ ಬೆಳವಣಿಗೆಯಲ್ಲ. ಚೀನಾದ ಪಾಲಿಗೂ ಇದು ಕೆಟ್ಟ ಬೆಳವಣಿಗೆ. ಯಾಕಂದ್ರೆ ಚೀನಾದ ಟೆಕ್ ಕಂಪನಿಗಳು, ರಿಯಲ್ ಎಸ್ಟೇಟ್ ಕಂಪನಿಗಳು ಸೇರಿದಂತೆ ಎಲ್ಲರನ್ನೂ ತನ್ನ ಕಿರು ಬೆರಳಿನಲ್ಲಿ ಕುಣಿಸಲು ಜಿನ್ಪಿಂಗ್ ಪ್ರಯತ್ನ ಪಡುತ್ತಿದ್ದಾರೆ. ವಿರೋಧಿಸುವವರನ್ನು ನಾನಾ ಕೇಸ್ ಹಾಕಿ ಅವರ ಜೀವನ ಕಷ್ಟ ಮಾಡಲಾಗುತ್ತಿದೆ. ಇದರ ಪರಿಣಾಮ ಇತ್ತೀಚಿಗೆ ವೇಗದ ಅಭಿವೃದ್ಧಿ ಕಂಡ ಚೀನಾದ ಆರ್ಥಿಕತೆಯಲ್ಲೂ ಸಣ್ಣ ಪ್ರಮಾಣದ ಸ್ಟ್ರೆಸ್ ಈಗ ಕಾಣೋಕೆ ಶುರುವಾಗಿದೆ.

-masthmagaa.com

Contact Us for Advertisement

Leave a Reply