ದೇಶಭಕ್ತಿ ಸಿನಿಮಾ ಬಗ್ಗೆ ಕಮೆಂಟ್ ಮಾಡಿದ್ದ ಚೀನೀ ಪತ್ರಕರ್ತ ಅರೆಸ್ಟ್​!

masthmagaa.com:

ಅಧಿಕಾರಿಗಳ ಭ್ರಷ್ಟಾಚಾರವನ್ನು ಬಯಲಿಗೆಳೆಯೋ ಕೆಲಸ ಮಾಡ್ತಿದ್ದ ಚೀನಾದ ಮಾಜಿ ಪತ್ರಕರ್ತ ಲುವೋ ಚಂಗ್​ಪಿನ್​​​​​​ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪತ್ರಕರ್ತ ದೇಶಭಕ್ತಿಯ ಸಿನಿಮಾ ಬಗ್ಗೆ ಕಾಮೆಂಟ್ ಮಾಡುವಾಗ ಕೊರಿಯನ್ ಯುದ್ಧದ ಹುತಾತ್ಮರಿಗೆ ಅವಮಾನ ಮಾಡಿದ್ದಾರೆ ಅನ್ನೋ ಆರೋಪ ಮಾಡಲಾಗಿದೆ. ಸೆಪ್ಟೆಂಬರ್ 30ರಂದು ದಿ ಬ್ಯಾಟಲ್ ಅಟ್ ಲೇಕ್ ಚಂಗ್​​​ಜಿನ್​​ ಅನ್ನೋ ಸಿನಿಮಾ ರಿಲೀಸ್ ಆಗಿತ್ತು. ಕೊರಿಯನ್ ವಾರ್ ಕುರಿತ ದೇಶಭಕ್ತಿಯ ಸಿನಿಮಾ ಇದಾಗಿತ್ತು. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾ ಬಗ್ಗೆ ಕಾಮೆಂಟ್ ಮಾಡಿದ್ದ ಚಂಗ್​ಪಿನ್​​, ಚೀನಾ ಜನತೆಯ ನ್ಯಾಯವಂತಿಕೆಯನ್ನು ಪ್ರಶ್ನೆ ಮಾಡಿದ್ರು. ಲುವೋ ತಾನು ಮಾಡಿರೋ ತಪ್ಪನ್ನು ಒಪ್ಪಿಕೊಂಡಿದ್ದಾರೆ ಅಂತ ಚೀನೀ ಮಾಧ್ಯಮಗಳು ವರದಿ ಮಾಡಿವೆ. ಆದ್ರೆ ಲುವೋ ನೇರವಾಗಿ ಮಾಡಿರೋ ಕಮೆಂಟ್ ಲಭ್ಯವಾಗಿಲ್ಲ.

-masthmagaa.com

Contact Us for Advertisement

Leave a Reply