ಭೂತಾನ್​​ನ ಗಡಿಯೊಳಗೆ ಚೀನಾದ ಗ್ರಾಮ! ಒಂದಲ್ಲ ಎರಡರಲ್ಲ.. ನಾಲ್ಕು!

masthmagaa.com:

ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೊತೆಗಿನ ಮಾತುಕತೆಯಲ್ಲಿ ಚೀನಾ ಬೇರೆ ಯಾವುದೇ ದೇಶದ ಒಂದು ಇಂಚು ಭೂಮಿಯನ್ನೂ ಅತಿಕ್ರಮಿಸೋದಿಲ್ಲ ಅಂತ ಶಿ ಜಿನ್​ಪಿಂಗ್ ಹೇಳಿದ್ರು. ತುಂಬಾ ದೊಡ್ಡ ಸಾಚಾ ರೀತಿ ಪೋಸ್ ಕೊಟ್ಟಿದ್ರು. ಆದ್ರೀಗ ಸದ್ದಿಲ್ಲದೇ ಪಕ್ಕದ ಭೂತಾನ್​​​ನ ಒಂದಷ್ಟು ಭಾಗವನ್ನು ಬಡಿದು ಬಾಯಿಗೆ ಹಾಕಿಕೊಳ್ಳಲು ಸಿದ್ಧತೆ ಮಾಡಿಕೊಳ್ತಿದೆ. ಇದಕ್ಕೆ ಈ ಉಪಗ್ರಹ ಚಿತ್ರಗಳೇ ಸಾಕ್ಷಿ.. ಡೆಟ್ರೆಸ್ಫಾ ಅನ್ನೋ ಸಂಸ್ಥೆ ಈ ಉಪಗ್ರಹ ಚಿತ್ರಗಳನ್ನು ಟ್ವೀಟ್ ಮಾಡಿದೆ. ಜೊತೆಗೆ ಭೂತಾನ್ ಮತ್ತು ಚೀನಾ ನಡುವಿನ ವಿವಾದಿತ ಪ್ರದೇಶದಲ್ಲಿ ಕಳೆದೊಂದು ವರ್ಷದಿಂದ ನಿರ್ಮಾಣ ಕಾರ್ಯಗಳು ನಡೀತಾ ಇವೆ. 100 ಕಿಲೋಮೀಟರ್ ವ್ಯಾಪ್ತಿಯಲ್ಲಿ 4 ಹೊಸ ಚೀನೀ ಗ್ರಾಮಗಳನ್ನು ನಿರ್ಮಿಸಲಾಗಿದೆ ಅಂತ ಮಾಹಿತಿ ನೀಡಿದೆ. ಅಂದಹಾಗೆ ಚೀನಾ ಮತ್ತು ಭೂತಾನ್ ನಡುವಿನ ಈ ವಿವಾದಿತ ಪ್ರದೇಶ ಇರೋದು ದೋಕ್ಲಾಂ ಹತ್ತಿರದಲ್ಲಿ.. ದೋಕ್ಲಾಂ ಭಾರತ, ಚೀನಾ ಮತ್ತು ಭೂತಾನ್​​ ಗಡಿ ಹಂಚಿಕೊಂಡಿರೋ ಟ್ರೈಜಂಕ್ಷನ್ ಪ್ರದೇಶವಾಗಿದೆ. ಈ ದೋಕ್ಲಾಂ ಜಾಗದಲ್ಲೇ 2017ರಲ್ಲಿ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಏರ್ಪಟ್ಟಿತ್ತು. ಹೀಗಾಗಿ ಈ ಭಾಗದಲ್ಲಿ ಹೊಸ ಗ್ರಾಮಗಳ ನಿರ್ಮಾಣ ಭಾರತಕ್ಕೂ ಆತಂಕದ ವಿಚಾರವಾಗಿದೆ. ಇನ್ನು ಭೂತಾನ್​​​ ಮತ್ತು ಚೀನಾ ನಡುವೆ ಈ ಪ್ರದೇಶದ ವಿಚಾರವಾಗಿ ದೀರ್ಘಕಾಲದಿಂದ ಸಂಘರ್ಷ ಇದ್ದು, ಇತ್ತೀಚೆಗಷ್ಟೇ ಒಪ್ಪಂದವಾಗಿತ್ತು. ಇದ್ರಲ್ಲಿ ಭೂತಾನ್ ಈ ಪ್ರದೇಶವನ್ನು ಚೀನಾಗೆ ಬಿಟ್ಟುಕೊಟ್ಟಿದ್ಯಾ ಅಥವಾ ಇಲ್ವಾ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಇತ್ತೀಚೆಗೆ ಅಮೆರಿಕ ರಕ್ಷಣಾ ಇಲಾಖೆ ಕೂಡ ಭಾರತಕ್ಕೆ ಅಂಟಿಕೊಂಡಿರೋ ವಿವಾದಿತ ಜಾಗಗಳಲ್ಲಿ ಚೀನಾ ಗ್ರಾಮಗಳನ್ನು ನಿರ್ಮಿಸ್ತಿದೆ ಅಂತ ಎಚ್ಚರಿಸಿತ್ತು.

-masthmagaa.com

Contact Us for Advertisement

Leave a Reply