ಚೀನಾಗೆ ಕೊರೋನಾ ತಂದಿದ್ದು ಅಮೆರಿಕಾದ ಸೇನೆಯಂತೆ..!

masthmagaa.com:

ಚೀನಾ: ಕೊರೋನಾ ವೈರಸ್ ವಿಚಾರವಾಗಿ ಅಮೆರಿಕ ಮತ್ತು ಚೀನಾ ನಡುವೆ ಸಂಘರ್ಷ ಮುಂದುವರಿದಿದೆ. ಇತ್ತೀಚೆಗಷ್ಟೇ ಅಮೆರಿಕಾ ಕೊರೋನಾ ವೈರಸನ್ನು ಚೀನಾ ವೈರಸ್, ವುಹಾನ್ ವೈರಸ್ ಎಂದು ಕರೆದಿತ್ತು. ಇದರಿಂದ ಚೀನಾ ಕೆರಳಿ ಕೆಂಡವಾಗಿತ್ತು. ಇದೀಗ ಚೀನಾದ ಅಧಿಕಾರಿಯೊಬ್ಬರು ಅಮೆರಿಕಾದಿಂದಲೇ ಕೊರೋನಾ ವೈರಸ್ ಬಂದಿದೆ. ಅಮೆರಿಕಾದ ಸೇನೆಯಿಂದ ಚೀನಾದಲ್ಲಿ ಕೊರೋನಾ ವೈರಸ್ ಹರಡಿತು ಅಂತ ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯಾನ್​, ವುಹಾನ್​​ನಲ್ಲಿ ಕೊರೋನಾ ವೈರಸ್ ಹರಡಲು ಅಮೆರಿಕಾದ ಸೇನೆ ಕಾರಣವಾಗಿರಬಹುದು. ಇಂಥ ಸಮಯದಲ್ಲಿ ಅಮೆರಿಕಾ ತನ್ನ ಜವಾಬ್ದಾರಿಯನ್ನು ನಿರ್ವಹಿಸಬೇಕು. ಪಾರದರ್ಶಕತೆಯನ್ನು ಮೆರೆಯಬೇಕು ಎಂದು ತಿಳಿಸಿದ್ದಾರೆ.  ಅಲ್ಲದೆ ಅಮೆರಿಕಾ ಮೊದಲು ತನ್ನ ದೇಶದಲ್ಲಿ ಎಷ್ಟು ಮಂದಿ ಕೊರೋನಾಗೆ ಬಲಿಯಾಗಿದ್ದಾರೆ..? ಕೊರೋನಾ ಎದುರಿಸಲು ಸಿದ್ಧತೆ ಹೇಗಿದೆ..? ಎಷ್ಟು ಆಸ್ಪತ್ರೆಗಳಲ್ಲಿ ಕೊರೋನಾ ಪೀಡಿತರಿಗೆ ವಿಶೇಷ ವ್ಯವಸ್ಥೆ ಮಾಡಲಾಗಿದೆ..? ಎಂದು ಜಗತ್ತಿನ ಮುಂದೆ ತಿಳಿಸಲಿ ಎಂದು ಸವಾಲ್ ಎಸೆದಿದ್ದಾರೆ.

-masthmagaa.com

Contact Us for Advertisement

Leave a Reply