ಚಿನ್ಮಯಾನಂದ ಬಿಜೆಪಿ ಸದಸ್ಯ ಅಲ್ಲ: ಬಿಜೆಪಿ

ಕಾನೂನು ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ, ಬ್ಲಾಕ್ ಮೇಲ್ ಮಾಡಿದ ಆರೋಪ ಎದುರಿಸುತ್ತಿರುವ ಚಿನ್ಮಯಾನಂದ ಸ್ವಾಮೀಜಿ ಈಗ ಜೈಲಿನಲ್ಲಿದ್ದಾರೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಬಿಜೆಪಿ ಪ್ರತಿಕ್ರಿಯೆ ನೀಡಿದೆ. ಬಿಜೆಪಿ ವಕ್ತಾರ ಶ್ರೀವಾತ್ಸವ ಮಾತನಾಡಿ, ಚಿನ್ಮಯಾನಂದ ಸ್ವಾಮಿ ಈಗ ಬಿಜೆಪಿ ಸದಸ್ಯರಲ್ಲ. ಕಾನೂನು ಅದರ ಕೆಲಸ ಮಾಡುತ್ತೆ ಅಂತ ತಿಳಿಸಿದ್ದಾರೆ. ಚಿನ್ಮಯಾನಂದ ಸ್ವಾಮೀಜಿ ಯಾವಾಗ ಬಿಜೆಪಿ ತ್ಯಜಿಸಿದ್ರು ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ನಿಖರವಾದ ದಿನಾಂಕ ಹೇಳಲು ಸಾಧ್ಯವಿಲ್ಲ. ಆದ್ರೆ ಚಿನ್ಮಯಾನಂದ ಸ್ವಾಮೀಜಿ ಬಿಜೆಪಿ ಸದಸ್ಯ ಅಲ್ಲ ಅಷ್ಟೆ ಅಂತ ಹೇಳಿದ್ದಾರೆ.

ಇನ್ನು ಇವತ್ತು ಬೆಳಗ್ಗೆಯಷ್ಟೇ ಪ್ರಕರಣದ ಸಂತ್ರಸ್ತೆ ಕಾನೂನು ವಿದ್ಯಾರ್ಥಿನಿಯನ್ನು ಎಸ್‍ಐಟಿ ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ಅಲ್ಲದೆ ಸುಲಿಗೆ ಆರೋಪದ ಅಡಿಯಲ್ಲಿ ಕೇಸ್ ದಾಖಲಿಸಿ, ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಪ್ರಕರಣ ಸಂಬಂಧ ಯುವತಿಯನ್ನು ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೂ ಒಪ್ಪಿಸಿತ್ತು.

ಚಿನ್ಮಯಾನಂದ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

Contact Us for Advertisement

Leave a Reply