ಭಾರತದಲ್ಲಿ ಯಾವ ಲಸಿಕೆ, ಎಷ್ಟನೇ ಹಂತದಲ್ಲಿದೆ?: ಅಧಿಕೃತ ಮಾಹಿತಿ ಇಲ್ಲಿದೆ

masthmagaa.com:

ಕೊರೋನಾಗೆ ಈಗ ಲಸಿಕೆ ಸಿಗುತ್ತೆ, ಆಮೇಲೆ ಲಸಿಕೆ ಸಿಗುತ್ತೆ ಅಂತೆಲ್ಲಾ ಹೇಳಲಾಗ್ತಿದೆ. ಈ ಸಂಬಂಧ ಐಸಿಎಂಆರ್ ಮತ್ತು ನೀತಿ ಆಯೋಗದ ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ ಭಾರತದಲ್ಲಿ ಅಭಿವೃದ್ಧಿಪಡಿಸುತ್ತಿರುವ ಲಸಿಕೆ ಯಾವ ಹಂತದಲ್ಲಿದೆ ಅನ್ನೋ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಭಾರತದಲ್ಲಿ ಒಟ್ಟು ಮೂರು ಲಸಿಕೆಗಳ ಮಾನವ ಪ್ರಯೋಗ ನಡೆಯುತ್ತಿದೆ. ಅದ್ರಲ್ಲಿ ಮುಂಚೂಣಿಯಲ್ಲಿರೋದು ಭಾರತ್​ ಬಯೋಟೆಕ್​ ಕಂಪನಿ ಮತ್ತು ಐಸಿಎಂಆರ್ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆ. ಈ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗಕ್ಕೆ ಅನುಮತಿ ಸಿಕ್ಕಿದೆ ಅಂತ ಐಸಿಎಂಆರ್ ತಿಳಿಸಿದೆ.

ಉಳಿದಂತೆ ಆಕ್ಸ್​​ಫರ್ಡ್​ ಮತ್ತು ಅಸ್ಟ್ರಾಝೆನೆಕಾ ಲಸಿಕೆ 2ನೇ ಹಂತ ಪೂರ್ಣಗೊಳಿಸುತ್ತಿದೆ. ಆಕ್ಸ್​ಫರ್ಡ್ ಲಸಿಕೆಯನ್ನ ಭಾರತದಲ್ಲಿ ಸೀರಂ ಇನ್​ಸ್ಟಿಟ್ಯೂಟ್​ ಆಫ್ ಇಂಡಿಯಾ ಮಾನವ ಪ್ರಯೋಗ ನಡೆಸುತ್ತಿದೆ. ಈ ಲಸಿಕೆಗೆ ಭಾರತದಲ್ಲಿ ಕೋವಿಶೀಲ್ಡ್​ ಅಂತ ಹೆಸರಿಡಲಾಗಿದೆ.

ಇನ್ನು ಮೂರನೇದಾಗಿ ಝೈಡಸ್​ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಲಸಿಕೆ ಕೂಡ 2ನೇ ಹಂತದಲ್ಲಿದೆ ಅಂತ ಐಸಿಎಂಆರ್ ತಿಳಿಸಿದೆ.

-masthmagaa.com

Contact Us for Advertisement

Leave a Reply