ನಮ್ಮಲ್ಲಿ ದಾಳಿಯ 90 ಪರ್ಸೆಂಟ್​ನಷ್ಟು ಅಫ್ಘನ್ ಉಗ್ರರಿಂದ ಆಗುತ್ತೆ: ಪಾಕ್

masthmagaa.com:

ಚೀನಾ ಪಾಕ್ ಎಕನಾಮಿಕ್ ಕಾರಿಡಾರ್​​​ ಯೋಜನೆಯನ್ನು ಟಾರ್ಗೆಟ್ ಮಾಡ್ತಿರೋ ಉಗ್ರ ಸಂಘಟನೆಗಳ ಪೈಕಿ 90 ಪರ್ಸೆಂಟ್​​​​ನಷ್ಟು ಅಫ್ಘಾನಿಸ್ತಾನದಿಂದ ಆಪರೇಟ್ ಮಾಡ್ತಿವೆ ಅಂತ ಪಾಕಿಸ್ತಾನದ ಕೌಂಟರ್ ಟೆರರಿಸಂ ಡಿಪಾರ್ಟ್​ಮೆಂಟ್ ಹೇಳಿದೆ. ಪಾಕ್​ನಲ್ಲೂ ಇಂಥದ್ದೊಂದು ಡಿಪಾರ್ಟ್​​ಮೆಂಟ್ ಇದೆ ಅನ್ನೋದೇ ಹಾಸ್ಯಾಸ್ಪದ. ಇದ್ರ ಡೆಪ್ಯುಟಿ ಇನ್​ಸ್ಪೆಕ್ಟರ್ ಜನರಲ್ ಜಾವೇದ್ ಇಕ್ಬಲ್ ವಜೀರ್ ಮಾತನಾಡಿ, ಪಾಕಿಸ್ತಾನದ ಗಡಿಭಾಗದ ಉಗ್ರ ದಾಳಿಗಳಲ್ಲಿ ಹೆಚ್ಚಿನವು ಅಫ್ಘಾನಿಸ್ತಾನದಿಂದ ನಡೀತಾ ಇದೆ. ಅಫ್ಘನ್​ನ ವಿವಿಧ ಉಗ್ರ ಸಂಘಟನೆಗಳು ಚೀನಾ ಪಾಕ್ ಎಕನಾಮಿಕ್ ಕಾರಿಡಾರ್​, ಆರ್ಥಿಕ ಚಟುವಟಿಕೆ ಮತ್ತು ಪೋಲಿಯೋ ಟೀಂ ಗುರಿಯಾಗಿಸಿ ದಾಳಿ ನಡೆಸ್ತಿವೆ ಅಂತ ಹೇಳಿದ್ದಾರೆ. ಇಂತಹ 40 ಟಾರ್ಗೆಟ್ ದಾಳಿಗಳು ನಡೆದಿದ್ದು, ಈವರೆಗೆ ಖೈಬರ್ ಪಖ್ತುಂಕ್ವಾ ಪ್ರಾಂತ್ಯವೊಂದ್ರಲ್ಲೇ 110 ಉಗ್ರರನ್ನು ಹೊಡೆದುರುಳಿಸಲಾಗಿದೆ. 599 ಉಗ್ರರನ್ನು ಅರೆಸ್ಟ್ ಕೂಡ ಮಾಡಲಾಗಿದೆ.

-masthmagaa.com

Contact Us for Advertisement

Leave a Reply