ಜೈಲಿಗೆ ಹೋಗ್ತಾರಾ ಮಹಾರಾಷ್ಟ್ರ ಬಿಜೆಪಿ ಸಿಎಂ..?

ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್‍ಗೆ ಸಂಕಷ್ಟ ಎದುರಾಗಿದೆ. 2014ರ ಚುನಾವಣಾ ಅಫಿಡವಿಟ್‍ನಲ್ಲಿ ಸುಳ್ಳು ಮಾಹಿತಿ ನೀಡಿರುವ ಪ್ರಕರಣ ಸಂಬಂಧ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. 2014ರ ಚುನಾವಣೆ ವೇಳೆ ತಮ್ಮ ವಿರುದ್ಧ ಇರುವ 2 ಕ್ರಿಮಿನಲ್ ಕೇಸ್‍ಗಳ ಬಗ್ಗೆ ದೇವೇಂದ್ರ ಫಡ್ನಾವಿಸ್ ಉಲ್ಲೇಖಿಸಿರಲಿಲ್ಲ. 1996 ಮತ್ತು 1998ರಲ್ಲಿ ದೇವೇಂದ್ರ ಪಡ್ನಾವಿಸ್ ವಿರುದ್ಧ ಫೋರ್ಜರಿ ಮತ್ತು ವಂಚನೆ ಪ್ರಕರಣ ದಾಖಲಾಗಿತ್ತು. ಆದ್ರೆ ಈ ಬಗ್ಗೆ ಅಫಿಡವಿಟ್‍ನಲ್ಲಿ ಉಲ್ಲೇಖಿಸಿರಲಿಲ್ಲ.

ಈ ಬಗ್ಗೆ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ದೇವೇಂದ್ರ ಫಡ್ನಾವಿಸ್‍ಗೆ ರಿಲೀಫ್ ನೀಡಿತ್ತು. ಆದ್ರೆ ಈ ಆದೇಶವನ್ನು ರದ್ದುಪಡಿಸಿರುವ ಸುಪ್ರೀಂಕೋರ್ಟ್, ಅಫಿಡವಿಟ್‍ನಲ್ಲಿ ಕೇಸ್‍ಗಳ ಬಗ್ಗೆ ಉಲ್ಲೇಖಿಸಬೇಕು. ಈ ಬಗ್ಗೆ ದೇವೇಂದ್ರ ಫಡ್ನಾವಿಸ್‍ಗೆ ಮಾಹಿತಿ ಇದೆ. ಆದರೂ ಅವರು ಮಾಹಿತಿ ನೀಡಿಲ್ಲ. ಹೀಗಾಗಿ ಪುನಃ ವಿಚಾರಣೆ ನಡೆಸುವಂತೆ ಹೈಕೋರ್ಟ್‍ಗೆ ಸೂಚಿಸಿದೆ. ಒಂದು ವೇಳೆ ಈ ಆರೋಪ ಸಾಬೀತಾದ್ರೆ, 6 ತಿಂಗಳು ಜೈಲು ಶಿಕ್ಷೆ ಅಥವಾ ದಂಡ ವಿಧಿಸೋ ಸಾಧ್ಯತೆ ಇದೆ.

ಆದ್ರೆ ಈ ಪ್ರಕರಣ ಅಕ್ಟೋಬರ್ 21ರಂದು ನಡೆಯಲಿರುವ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಅಂತ ಆಯೋಗ ತಿಳಿಸಿದೆ.

Contact Us for Advertisement

Leave a Reply