ಹೆಂಡ್ತಿ ಇದ್ರೂ 2ನೇ ಮದುವೆಯಾಗೋ ಹಿಂದೂ ಗಂಡಂದಿರಿಗೆ ಕಾದಿದೆ ಹಬ್ಬ..!

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ತ್ರಿವಳಿ ತಲಾಖ್‍ನಿಂದ ನೊಂದ ಮಹಿಳೆಯರನ್ನು ಭೇಟಿಯಾಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ಈ ರೀತಿ ಮೋಸ ಹೋದ ಹಿಂದೂ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡಲು ಹೊಸ ಕಾನೂನನ್ನು ತರಲಾಗುತ್ತೆ. ಒಂದು ಮದುವೆಯಾಗಿ ಮತ್ತೊಂದು ಸಂಬಂಧ ಹೊಂದುವ ಪುರುಷರಿಗೂ ಶಿಕ್ಷೆ ನೀಡುವಂತಹ ಕಾನೂನು ಜಾರಿಗೆ ತರಲಾಗುತ್ತೆ ಅಂದ್ರು. ಜೊತೆಗೆ ತ್ರಿವಳಿ ತಲಾಖ್‍ನಿಂದ ನೊಂದಿರೋ ಮಹಿಳೆಯರ ಪ್ರಕರಣದಲ್ಲಿ ಕೋರ್ಟ್‍ನಲ್ಲಿ ಸರ್ಕಾರವೇ ಹೋರಾಟ ನಡೆಸುತ್ತೆ. ಅಲ್ಲದೆ ಅಂತಹ ಮಹಿಳೆಯರಿಗೆ 6000 ರೂಪಾಯಿ ನೀಡುವ ಯೋಜನೆಯನ್ನೂ ರೂಪಿಸಲಾಗಿದೆ. ಅಲ್ಲದೆ ತ್ರಿವಳಿ ತಲಾಖ್‍ಗೆ ಒಳಗಾದ ಮಹಿಳೆಯರಿಗೆ ಮನೆ ಇಲ್ಲದಿದ್ದರೆ ಮನೆ, ಮಕ್ಕಳಿಗೆ ಶಿಕ್ಷಣ, ಸ್ಕಾಲರ್ ಶಿಪ್ ನೀಡಲಾಗುತ್ತೆ ಅಂತ ಹೇಳಿದ್ದಾರೆ.

Contact Us for Advertisement

Leave a Reply