ಬೀದಿಗಿಳಿದು ಹೋರಾಟ ಮಾಡಿ! ಜಗತ್ತಿಗೆ ಜೆಲನ್‌ಸ್ಕಿ ಕರೆ

masthmagaa.com:

ಯುಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿ ಇವತ್ತಿಗೆ ಸರಿಯಾಗಿ ಒಂದು ತಿಂಗ್ಳು ಕಳೆದಿರೋ ಈ ಸಂದರ್ಭದಲ್ಲಿ ಯುಕ್ರೇನ್‌ ಅಧ್ಯಕ್ಷ ವೊಲೊದಿಮಿರ್‌ ಜೆಲನ್‌ಸ್ಕಿ, ರಷ್ಯಾ ವಿರುದ್ಧ ಪ್ರತಿಭಟಿಸ್ತಾ ಇರೋ ಎಲ್ರೂ ನಿಮ್ಮ ನಿಮ್ಮ ಬೀದಿಗೆ ಬಂದು ಹೋರಾಟ ಮಾಡಿ ಅಂತ ಕರೆ ನೀಡಿದ್ದಾರೆ. ಇಡೀ ಜಗತ್ತಿನ ಪ್ರತಿಭಟನಾಕಾರರನ್ನ ಉದ್ದೇಶಿಸಿ ಇಂಗ್ಲೀಷ್ನಲ್ಲಿ ಮಾತಾಡಿರೋ ಜೆಲನ್‌ಸ್ಕಿ, ಯುಕ್ರೇನ್‌ ಸಂಕೇತದ ಗುರುತುಗಳನ್ನ ಹಿಡ್ಕೊಂಡು, ಯುಕ್ರೇನ್‌ ಮತ್ತು ಸ್ವಾತಂತ್ರ್ಯವನ್ನ ಬೆಂಬಲಿಸೋಕೆ ನಿಮ್ಮ ನಿಮ್ಮ ಸರ್ಕಲ್‌ಗಳು, ಬೀದಿಗಳಿಗೆ ಬಂದು ಎಲ್ಲರಿಗೂ ಕಾಣುವಂತೆ ಎಲ್ಲರಿಗೂ ಕೇಳುವಂತೆ ಹೋರಾಟ ಮಾಡಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply