PM ಮೋದಿ ವಿರುದ್ಧ ಚುನಾವಣೆ ಆಯೋಗಕ್ಕೆ ಕಾಂಗ್ರೆಸ್‌ ದೂರು!

masthmagaa.com:

ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ರಾಜಸ್ಥಾನದ ಅಜ್ಮೀರ್‌ನಲ್ಲಿ ಬಿಜೆಪಿ ರ್ಯಾಲಿ ವೇಳೆ ಪಿಎಂ ಮೋದಿ ಕಾಂಗ್ರೆಸ್‌ ಪ್ರಣಾಳಿಕೆಯನ್ನ ಟೀಕಿಸಿದ್ರು. ಕಾಂಗ್ರೆಸ್‌ ಪ್ರನಾಳಿಕೆಯನ್ನ ಮುಸ್ಲಿಂ ಲೀಗ್‌ನ ಪ್ರಣಾಳಿಕೆ ಜೊತೆ ಹೋಲಿಕೆ ಮಾಡಿದ್ರು. ರ್ಯಾಲಿಯಲ್ಲಿ ಮಾತಾಡೋ ವೇಳೆ ಅವ್ರು, ʻಕಾಂಗ್ರೆಸ್‌ ಪ್ರನಾಳಿಕೆ ಒಂದು ಸುಳ್ಳಿನ ಕಂತೆ. ಅದ್ರಲ್ಲಿರೋದು ಭಾರತದವನ್ನ ತುಂಡುತುಂಡಾಗಿಸೋ ಪ್ರಯತ್ನಕ್ಕೆ ಬೇಕಾಗಿರೋ ತಂತ್ರಗಳು. ಮುಸ್ಲಿಂ ಲೀಗ್‌ನ ಮುದ್ರೆ ಇರೋ ಈ ಮ್ಯಾನಿಫೆಸ್ಟೋದಲ್ಲಿ ಉಳಿದಿದ್ದನ್ನೆಲ್ಲಾ ಎಡಪಂಥೀಯರು ತಗೊಂಡ್‌ ಹೋಗಿದ್ದಾರೆʼ ಅಂತ ಟೀಕಿಸಿದ್ರು. ಈ ಹೇಳಿಕೆ ವಿರುದ್ಧ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಅಲ್ಲದೆ ಪಿಎಂ ಮೋದಿ ಮಾತಿಗೆ ತಿರುಗೇಟು ನೀಡಿರೋ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ್‌ ಖರ್ಗೆ, ಮೋದಿ-ಶಾ ಅವ್ರ ರಾಜಕೀಯ ಹಾಗೂ ಸೈದ್ಧಾಂತಿಕ ಪೂರ್ವಜರು ಬ್ರಿಟಿಷರು ಹಾಗೂ ಮುಸ್ಲಿಂ ಲೀಗ್‌ಗೆ ಸಪೋರ್ಟ್‌ ಮಾಡಿದ್ರುʼ ಅಂತ ಟಾಂಗ್‌ ಕೊಟ್ಟಿದ್ದಾರೆ.

-masthmagaa.com

Contact Us for Advertisement

Leave a Reply