ಇವತ್ತೂ ನಿರ್ಧಾರವಾಗಲ್ವಾ ಅನರ್ಹರ ಭವಿಷ್ಯ..?

ದೋಸ್ತಿ ಸರ್ಕಾರ ಬೀಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅನರ್ಹ ಶಾಸಕರ ಭವಿಷ್ಯ ಕೂಡ ಇಂದೇ ನಿರ್ಧಾರವಾಗಲಿದೆ. ಅನರ್ಹ ಶಾಸಕರು ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಇಂದು ಪುನಃ ವಿಚಾರಣೆಗೆ ಬರಲಿದೆ. ಇಂದು ಕೇವಲ ಅನರ್ಹ ಶಾಸಕರ ಪರ ವಕೀಲರಾದ ಮುಕುಲ್ ರೋಹ್ಟಗಿ ವಾದವನ್ನು ಮಾತ್ರವೇ ನ್ಯಾಯಾಧೀಶರು ಆಲಿಸದ್ದಾರೆ. ನಾಳೆ ಕಾಂಗ್ರೆಸ್ ಮತ್ತು ಜೆಡಿಎಸ್ ಪರ ವಕೀಲರ ವಾದವನ್ನು ಆಲಿಸಲಿದ್ದಾರೆ. ಸೋಮವಾರವೂ ಈ ಬಗ್ಗೆ ವಿಚಾರಣೆ ನಡೆಸಿದ್ದ ನ್ಯಾ.ರಮಣ ನೇತೃತ್ವದ ಪೀಠ, ಇಂದಿಗೆ ಅರ್ಜಿ ವಿಚಾರಣೆ ಮುಂದೂಡಿದ್ದರು. ಇನ್ನು ಚುನಾವಣಾ ಆಯೋಗ ಕೂಡ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸಬಹುದು. ನಮ್ಮ ಕಡೆಯಿಂದ ಯಾವುದೇ ಆಕ್ಷೇಪವಿಲ್ಲ ಎಂದು ಹೇಳಿತ್ತು.

ಇನ್ನು ಈ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಅನರ್ಹ ಶಾಸಕ ಆರ್.ಶಂಕರ್, ನನ್ನ ಕ್ಷೇತ್ರದಲ್ಲಿ ಚುನಾವಣೆ ನಡೆಯಲ್ಲ. ಚುನಾವಣೆಗೆ ತಡೆ ನೀಡುವಂತೆ ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು ಇಂದು ವಿಚಾರಣೆ ನಡೆಯುತ್ತೆ. ನಮ್ಮ ಕೆಪಿಜೆಪಿ ಪಕ್ಷ ಕಾಂಗ್ರೆಸ್ ಜೊತೆ ವಿಲೀನವಾಗಿಲ್ಲ ಅಂತ ಹೇಳಿದ್ರು.

Contact Us for Advertisement

Leave a Reply