ರಫೇಲ್ ಪೂಜೆ ನಾಟಕ ಎಂದ ಖರ್ಗೆ..! ಖರ್ಗೆ ವಿರುದ್ಧ ಸ್ವಪಕ್ಷೀಯರೇ ಕೆಂಡ..!

ರಫೇಲ್ ಯುದ್ಧ ವಿಮಾನಕ್ಕೆ ಶಸ್ತ್ರಪೂಜೆ ಮೂಲಕ ನಾಟಕ ಮಾಡೋ ಅಗತ್ಯ ಇರಲಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ನಿನ್ನೆ ಫ್ರಾನ್ಸ್‍ನಲ್ಲಿ ರಫೇಲ್ ವಿಮಾನವನ್ನು ಸಾಂಕೇತಿಕವಾಗಿ ಸ್ವೀಕರಿಸಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಯುಧಪೂಜೆ ನೆರವೇರಿಸಿದ್ದರು. ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಮಲ್ಲಿಕಾರ್ಜುನ ಖರ್ಗೆ, ಯುದ್ಧ ವಿಮಾನಕ್ಕೆ ಪೂಜೆ ಸಲ್ಲಿಸಿ ತಮಾಷೆ ಮಾಡೋ ಅಗತ್ಯ ಇರಲಿಲ್ಲ. ನಾವು ಈ ಹಿಂದೆ ಬೋಫೋರ್ಸ್ ಗನ್‍ಗಳಂತಹ ಶಸ್ತ್ರಾಸ್ತ್ರಗಳನ್ನು ಖರೀದಿಸಿದಾಗ ಈ ರೀತಿ ಪ್ರಚಾರ ಗಿಟ್ಟಿಸಿಕೊಂಡಿರಲಿಲ್ಲ ಎಂದಿದ್ದಾರೆ.

ಆದ್ರೆ ಮಲ್ಲಿಕಾರ್ಜುನ ಖರ್ಗೆಗೆ ಸ್ವಪಕ್ಷದವರಾದ ಸಂಜಯ್ ನಿರುಪಮ್ ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಆಯುಧಪೂಜೆ ಮೂಢನಂಬಿಕೆ ಅಲ್ಲ. ನಾಟಕವೂ ಅಲ್ಲ. ಅದು ನಮ್ಮ ಸಂಪ್ರದಾಯದ ಪ್ರತೀಕ. ಖರ್ಗೆಯವರು ನಾಸ್ತಿಕರಾಗಿರೋದ್ರಿಂದ ಅವರಿಗೆ ಇದೆಲ್ಲಾ ತಮಾಷೆ ಅನ್ನಿಸುತ್ತೆ. ಇಂಥವರು ಕೇವಲ ಶೇ.1ರಷ್ಟು ಇದ್ದಾರೆ ಅಷ್ಟೆ. ಇಂಥವರ ಯೋಚನೆ ಕಾಂಗ್ರೆಸ್ ಯೋಚನೆಯಾಗಲು ಸಾಧ್ಯವಿಲ್ಲ ಎಂದಿದ್ದಾರೆ.

Contact Us for Advertisement

Leave a Reply