ಕೊರೋನಾ ಕಾಲದಲ್ಲೇ ದಾಖಲೆ ಮಟ್ಟದಲ್ಲಿ ಹೆಚ್ಚಿದ ಕಾರ್ಬನ್ ಡೈ ಆಕ್ಸೈಡ್​!

masthmagaa.com:

ಕೊರೋನಾ ಬಂದ್ಮೇಲೆ ಜಗತ್ತಲ್ಲಿ ವಾಣಿಜ್ಯ ಚಟುವಟಿಕೆಗಳ ವೇಗಕ್ಕೆ ಬ್ರೇಕ್ ಬಿದ್ದಿದೆ. ತಿಂಗಳುಗಟ್ಟಲೆ ಲಾಕ್​ಡೌನ್​​​ನಿಂದಾಗಿ ವಾಹನಗಳ ಓಡಾಟ ಕೂಡ ಬಂದ್ ಆಗಿದೆ. ಇದರಿಂದ ವಾಹನ ಮತ್ತು ಕಾರ್ಖಾನೆಗಳ ಹೊಗೆ ಪ್ರಮಾಣ ಕಡಿಮೆಯಾಗಿ ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಕಡಿಮೆಯಾಗ್ಬೇಕಿತ್ತು. ಆದ್ರೆ ಅದು ಉಲ್ಟಾ ಆಗಿದೆ. ಮೇ ತಿಂಗಳವರೆಗೆ ಇತಿಹಾಸದಲ್ಲೇ ಮೊದಲ ಬಾರಿಗೆ ವಾತಾವರಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಗರಿಷ್ಠ ಮಟ್ಟ ತಲುಪಿದೆ ಅಂತ ಗೊತ್ತಾಗಿದೆ. National Oceanic and Atmospheric Administration (NOAA) ಮತ್ತು the Scripps Institution of Oceanography at the University of California San Diegoದ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಈ ವಿಚಾರ ಬಹಿರಂಗಪಡಿಸಿದ್ದಾರೆ. ಇದು ಹವಾಯ್​​​ನ ಮೌನಾ ಲಾವೋದಲ್ಲಿರೋ ಎನ್​​ಒಎಎ ವೆದರ್ ​ಸ್ಟೇಷನ್​​ನಲ್ಲಿರೋ ಗಾಳಿಯಲ್ಲಿರೋ ಕಾರ್ಬನ್ ಡೈ ಆಕ್ಸೈಡ್ ಆಧಾರದ ಮೇಲೆ ಈ ವರದಿ ಸಿದ್ಧಪಡಿಸಲಾಗಿದೆ. ಕಳೆದ 63 ವರ್ಷಗಳಿಂದ ಈ ರೀತಿ ಗಾಳಿಯಲ್ಲಿರೋ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಅಳೆಯೋಕೆ ಶುರು ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಇದೇ ಮೊದಲ ಬಾರಿಗೆ ಹೆಚ್ಚು ಪ್ರಮಾಣದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪತ್ತೆಯಾಗಿದೆ. ಇಲ್ಲಿ 1958ರಲ್ಲಿ ಚಾರ್ಲ್ಸ್​​ ಡೇವಿಡ್ ಕೀಲಿಂಗ್ ಅನ್ನೋ ವಿಜ್ಞಾನಿ ವಾತಾವರಣದಲ್ಲಿರೋ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಅಳೆಯೋಕೆ ಶುರು ಮಾಡಿದ್ರು. ಕ್ಲೈಮೇಟ್​ ಚೇಂಜ್​​​ನಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಮುಖ ಪಾತ್ರ ವಹಿಸುತ್ತೆ. ನಾವು ಪ್ರತಿ ವರ್ಷ 40 ಬಿಲಿಯನ್ ಅಂದ್ರೆ 4 ಸಾವಿರ ಕೋಟಿ ಮೆಟ್ರಿಕ್ ಟನ್​​​ನಷ್ಟು ಕಾರ್ಬನ್ ಡೈ ಆಕ್ಸೈಡ್​ನ್ನು ಪರಿಸರಕ್ಕೆ ಕೊಡ್ತಿದ್ದೀವಿ ಅಂತ ತಜ್ಞರು ಮಾಹಿತಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply