5 ದಿನಗಳಲ್ಲಿ ಈ 3 ಲಕ್ಷಣ ಕಾಣಿಸಿದ್ರೆ ಕೊರೋನಾ ಬಂದಿದೆ ಎಂದು ಅರ್ಥ…

masthmagaa.com

ದಿನೇ ದಿನೇ ಕೊರೋನಾದಿಂದ ಸಂಭವಿಸುತ್ತಿರುವ ಸಾವಿನ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಹಾಗಾದ್ರೆ ಕೊರೋನಾ ಬಂದಿರೋದು ಹೇಗೆ ಗೊತ್ತಾಗುತ್ತೆ ಅನ್ನೋದು ತುಂಬಾ ಮುಖ್ಯವಾಗುತ್ತೆ. ಜರ್ನಲ್ ಆನಲ್ ಆಫ್ ಇಂಟರ್​ನಲ್ ಮೆಡಿಸಿನ್​​ನ ಒಂದು ವರದಿಯ ಪ್ರಕಾರ, ಕೊರೋನಾ ವೈರಸ್ ಬಂದ್ರೆ ಮೊದಲ 5 ದಿನಗಳಲ್ಲಿ ಪ್ರಮುಖವಾಗಿ 3 ಲಕ್ಷಣಗಳು ಕಾಣಿಸುತ್ತವೆ. ಅವುಗಳು ಯಾವುದು ಅಂತ ಈ ವರದಿಯಲ್ಲಿ ನೋಡೋಣ..

1.ಅಮೆರಿಕಾದ ಸಂಶೋಧಕರ ಪ್ರಕಾರ ಕೊರೋನಾ ವೈರಸ್ ಬಂದ 5 ದಿನಗಳಲ್ಲಿ ಒಣಕೆಮ್ಮು, ಶೀತ ಶುರುವಾಗುತ್ತೆ.

2. ಒಣಕೆಮ್ಮಿನ ಜೊತೆಗೆ ತೀವ್ರವಾಗಿ ಜ್ವರ ಬರುತ್ತೆ. ಶರೀರದ ಉಷ್ಣಾಂಶ ಹೆಚ್ಚಾಗುತ್ತೆ.

3. ಮೂರನೇ ಲಕ್ಷಣ ತುಂಬಾ ಮುಖ್ಯವಾಗಿದೆ. ಯಾಕಂದ್ರೆ ಈ ಲಕ್ಷಣವೇ ಉಳಿದ ಸೋಂಕುಗಳಿಂದ ಕೊರೋನಾ ಸೋಂಕನ್ನು ಪ್ರತ್ಯೇಕವಾಗಿಸುತ್ತೆ. ಅಂದ್ರೆ ಒಣಕೆಮ್ಮು, ಜ್ವರದ ಜೊತೆಗೆ ಐದು ದಿನಗಳೊಳಗೆ ಉಸಿರಾಟದ ಸಮಸ್ಯೆ ಶುರುವಾಗುತ್ತೆ.

ಇವುಗಳು ಕೊರೋನಾ ವೈರಸ್​ನ ಆರಂಭಿದ 5 ದಿನದ ಲಕ್ಷಣಗಳು.. ಬರೀ ಕೆಮ್ಮು, ಶೀತ ಬಂದಕೂಡಲೇ ಕೊರೋನಾ ಬಂದಿದೆ ಅಂತ ಹೆದರಿಕೊಳ್ಳಬೇಡಿ.. ಈ ಮೇಲಿನ ಮೂರು ಲಕ್ಷಣಗಳನ್ನು ಎಲ್ಲರಿಗೂ ಶೇರ್ ಮಾಡಿ, ಜಾಗೃತಿ ಮೂಡಿಸಿ..

masthmagaa.com

Contact Us for Advertisement

Leave a Reply