2022ರವರೆಗೆ ಕೊರೋನಾದಿಂದ ಮುಕ್ತಿ ಇಲ್ಲ: WHO

masthmagaa.com:

ಕೊರೋನಾ ವೈರಸ್​​​​​ಗೆ ಲಸಿಕೆ ಯಾವಾಗ ಬರುತ್ತೆ.. ಎಲ್ಲವೂ ಯಾವಾಗ ಸರಿಯಾಗುತ್ತೆ ಅಂತ ಜನ ಕಾಯ್ತಿದ್ದಾರೆ.. ಆದ್ರೆ ವಿಶ್ವ ಆರೋಗ್ಯ ಸಂಸ್ಥೆಯ ಚೀಫ್ ಸೈಂಟಿಸ್ಟ್​​ ಸೌಮ್ಯ ಸ್ವಾಮಿನಾಥನ್ ಒಂದು ಹೇಳಿಕೆ ಮೂಲಕ ಜನರ ಭರವಸೆಗೆ ದೊಡ್ಡ ಪೆಟ್ಟು ನೀಡಿದ್ದಾರೆ. ಕೊರೋನಾ ಲಸಿಕೆ ಬಗ್ಗೆ ಮಾತನಾಡಿದ ಅವರು, ಜನಜೀವನ ಸಾಮಾನ್ಯ ಸ್ಥಿತಿಗೆ ಬರಲು ಸರಿಯಾದ ಪ್ರಮಾಣದಲ್ಲಿ ಲಸಿಕೆಯ ಅಗತ್ಯತೆ ಇದೆ. ಆದ್ರೆ 2022ರವರೆಗೆ ಸಮರ್ಪಕ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆ ಸಾಧ್ಯವಿಲ್ಲ ಎಂದಿದ್ಧಾರೆ. ವಿಶ್ವ ಆರೋಗ್ಯ ಸಂಸ್ಥೆಯ ಕೋವ್ಯಾಕ್ಸ್​​ ಕಾರ್ಯಕ್ರಮದಡಿಯಲ್ಲಿ ವಿಶ್ವದ ವಿವಿಧ ದೇಶಗಳಿಗೆ ಲಸಿಕೆಯನ್ನು ನ್ಯಾಯಯುತವಾಗಿಯೇ ತಲುಪಿಸಲಾಗುತ್ತೆ ಅಂತ ಹೇಳಿದ್ಧಾರೆ.

ಮುಂದಿನ ವರ್ಷ ಜನವರಿ ವೇಳೆಗೆ ಎಲ್ಲರಿಗೂ ಲಸಿಕೆ ಸಿಕ್ಕಿಬಿಡುತ್ತೆ.. ಜನಜೀವನ ಸಹಜ ಸ್ಥಿತಿಗೆ ಬರುತ್ತೆ ಅಂತ ಭಾವಿಸಲಾಗುತ್ತಿದೆ. ಆದ್ರೆ ವಾಸ್ತವದಲ್ಲಿ ಹೀಗೆ ಆಗೋದಿಲ್ಲ. 2021ರ ಮಧ್ಯದಲ್ಲಿ ನಾವು ಲಸಿಕೆಯ ಮೌಲ್ಯಮಾಪನ ಮಾಡಬಹುದು. 2021ರ ಆರಂಭದಲ್ಲಿ ಲಸಿಕೆಯ ಫಲಿತಾಂಶವನ್ನು ನೋಡಲು ಸಾಧ್ಯವಾಗುತ್ತೆ ಅಂತ ಹೇಳಿದ್ಧಾರೆ.

-masthmagaa.com

 

Contact Us for Advertisement

Leave a Reply