ಕೊರೋನಾ 37 ದಿನ ಜೀವಂತವಾಗಿರುತ್ತೆ: ಸ್ಫೋಟಕ ಮಾಹಿತಿ

masthmagaa.com:

ಕೊರೋನಾ ವೈರಸ್ ಮನುಷ್ಯನ ದೇಹಕ್ಕೆ ಪ್ರವೇಶಿಸಿದ್ರೆ 37 ದಿನಗಳ ಕಾಲ ಜೀವಂತವಾಗಿರುತ್ತೆ ಅಂತ ಹೊಸ ಅಧ್ಯಯನವೊಂದು ದೃಢಪಡಿಸಿದೆ. ಈ ಸೋಂಕು ಶ್ವಾಸಕೋಶದಲ್ಲಿ ಪ್ರಭಾವ ಬೀರುತ್ತಾ 5 ವಾರಗಳ ಕಾಲ ದೇಹದಲ್ಲಿ ಉಳಿದುಕೊಳ್ಳುತ್ತೆ ಅಂತ ತಿಳಿದುಬಂದಿದೆ. ಚೀನಾದಲ್ಲಿ ಸೋಂಕು ತಗುಲಿದ ಬಳಿಕವೂ ಬದುಕುಳಿದವರ ಉಸಿರಾಟದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಯ್ತು. 20 ದಿನಗಳ ಬಳಿಕ ಪಡೆದ ಮಾದರಿಯಲ್ಲಿ ಕೊರೋನಾ ವೈರಸ್​​​​​ನ ಆರ್​ಎನ್​ಎ ಪತ್ತೆಯಾಗಿದೆ.

ಆದ್ರೆ ಸದ್ಯ ಕೊರೋನಾ ಹರಡೋದನ್ನು ತಡೆಯಲು ಕೊರೋನಾ ಪೀಡಿತರನ್ನು 14 ದಿನಗಳವರೆಗೆ ಮಾತ್ರವೇ ನಿರ್ಬಂಧದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಕೊರೋನಾ ಪೀಡಿತರು ಚಿಕಿತ್ಸೆ ಪಡೆದು ಬಂದ ಬಳಿಕವೂ ಅವರ ದೇಹದಲ್ಲಿ 37 ದಿನಗಳವರೆಗೆ ಕೊರೋನಾದ ಆರ್​ಎನ್​ಎ ಇರುತ್ತೆ. ಹೀಗಾಗಿ ಮತ್ತೆ ಅದು ಬೆಳವಣಿಗೆಯಾಗಿ, ಬೇರೆಯವರಿಗೆ ಹರಡುವ ಸಾಧ್ಯತೆ ಇರುತ್ತೆ ಅಂತ ನೂತನ ಸಂಶೋಧನೆಯಿಂದ ತಿಳಿದುಬಂದಿದೆ.

-masthmagaa.com

Contact Us for Advertisement

Leave a Reply