ಕೊರೋನಾ ಸೋಲಿಸಿದ 100ರ ಹರೆಯದ ವೃದ್ಧರ ಕಥೆ ನೋಡಿ…

masthmagaa.com:

ಚೀನಾದ ವುಹಾನ್​ನಲ್ಲಿ ಶುರುವಾದ ಕೊರೋನಾ ವೈರಸ್ ಭಾರತ, ಅಮೆರಿಕ, ಇಟಲಿ, ಇರಾನ್, ಪಾಕಿಸ್ತಾನ ಸೇರಿದಂತೆ ವಿಶ್ವದ 164 ರಾಷ್ಟ್ರಗಳಿಗೆ ವ್ಯಾಪಿಸಿದೆ. ವಿಶ್ವದಾದ್ಯಂತ 2 ಲಕ್ಷಕ್ಕೂ ಹೆಚ್ಚಿನ ಜನ ಸೋಂಕಿಗೆ ತುತ್ತಾಗಿದ್ದಾರೆ. ಈಗಾಗಲೇ 9 ಸಾವಿರ ಜನ ಜೀವ ಬಿಟ್ಟಿದ್ದಾರೆ. ಈ ಕಾಯಿಲೆ ಮಕ್ಕಳು ಮತ್ತು ವೃದ್ಧರಿಗೆ ತುಂಬಾ ಪರಿಣಾಮಕಾರಿಯಾಗಿದ್ದು, ಬದುಕೋದು ಕಷ್ಟ ಅಂತ ಹೇಳಲಾಗಿದೆ.

ಆದ್ರೆ 103 ವರ್ಷದ ಅಜ್ಜಿಯೊಬ್ಬರು ಈ ಭಯಾನಕ ಕಾಯಿಲೆ ವಿರುದ್ಧ ಹೋರಾಡಿ, ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇರಾನ್ ರಾಜಧಾನಿ ಟೆಹ್ರಾನ್​​ನಿಂದ 180 ಕಿಲೋಮೀಟರ್ ದೂರದಲ್ಲಿರೋ ಸೆಮನಾನ್ ಆಸ್ಪತ್ರೆಯಲ್ಲಿ ಕೊರೋನಾ ಪೀಡಿತ ಈ ಅಜ್ಜಿ ದಾಖಲಾಗಿದ್ದರು.

ಆದ್ರೆ ಅಜ್ಜಿ ಚಮತ್ಕಾರದ ರೀತಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಇವರಿಗೂ ಮುನ್ನ 91 ವರ್ಷದ ರೋಗಿಯೊಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಜಾರ್ಜ್​ ಆಗಿದ್ದರು.

ಇನ್ನು ಚೀನಾದಲ್ಲೂ 103 ವರ್ಷದ ಅಜ್ಜಿ ಮತ್ತು 101 ವರ್ಷದ ವೃದ್ಧರೊಬ್ಬರು ಕೊರೋನಾ ಸೋಂಕಿಗೆ ತುತ್ತಾಗಿ, ಹುಷಾರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

-masthmagaa.com

Contact Us for Advertisement

Leave a Reply