ಕೈ ತೊಳೆಯೋದರ ಮಹತ್ವ ಅರ್ಥವಾಗಲು ವಿಡಿಯೋ ನೋಡಿ…ಶೇರ್ ಮಾಡಿ…

ಕೊರೋನಾ ವೈರಸ್ ಬಗ್ಗೆ ಇಡೀ ವಿಶ್ವದಲ್ಲಿ ಆತಂಕ ಮನೆ ಮಾಡಿದೆ. ಎಲ್ಲರೂ ಪದೇ ಪದೇ ಕೈ ತೊಳೆದುಕೊಳ್ಳಿ ಅಂತ ಸಲಹೆ ಕೊಡ್ತಿದ್ದಾರೆ. ಆದ್ರೆ ಅದೆಷ್ಟೋ ಜನಕ್ಕೆ ಕೈ ತೊಳೆಯೋದ್ರ ಮಹತ್ವವೇ ಗೊತ್ತಿಲ್ಲ. ಕೈಯಲ್ಲಿ ಏನಾದ್ರೂ ಮಣ್ಣಾದ್ರೆ, ಗಲೀಜಾದ್ರೆ ಮಾತ್ರವೇ ಕೈ ತೊಳೀತಾರೆ. ಆದ್ರೆ ನಮ್ಮ ಕೈ ಮೇಲ್ನೋಟಕ್ಕೆ ಗಲೀಜಾಗಿ ಕಾಣದೇ ಇದ್ದರೂ, ಭಾರಿ ಸಂಖ್ಯೆಯಲ್ಲಿ ವೈರಾಣುಗಳಿರುತ್ತವೆ. ಹೀಗಾಗಿ ಹೊರಗೆಲ್ಲಾ ಹೋದ್ರೆ ಮನೆಗೆ ಬಂದ ಕೂಡಲೇ ಕೈ ತೊಳೆದುಕೊಳ್ಳಿ..

ಅದೇ ರೀತಿ ಕೈತೊಳೆಯೋ ಜಾಗೃತಿ ಮೂಡಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಇದ್ರಲ್ಲಿ ವೈರಾಣುಗಳು ತುಂಬಿರುವ ನೀರಿನಲ್ಲಿ ಮೊದಲಿಗೆ ಕೈ ಬೆರಳನ್ನು ಮುಳುಗಿಸಲಾಗುತ್ತೆ. ಆಗ ವೈರಾಣುಗಳು ಕೈಗೆ ಅಂಟಿಕೊಳ್ಳುತ್ತವೆ. ನಂತರ ಅದೇ ಬೆರಳನ್ನು ಸೋಪಿನ ಲಿಕ್ವಿಡ್​​​ಗೆ ಮುಳುಗಿಸಿ, ಪುನಃ ವೈರಾಣು ತುಂಬಿರೋ ನೀರಿಗೆ ಮುಳುಗಿಸಿದಾಗ ವೈರಾಣುಗಳೆಲ್ಲವೂ ದಿಕ್ಕಾಪಾಲಾಗಿ ಓಡಿಹೋಗುತ್ತವೆ. ಈ ವಿಡಿಯೋವನ್ನು ನೀವೂ ನೋಡಿ…

Contact Us for Advertisement

Leave a Reply