ಚೀನಾದಲ್ಲಿ ಕೊರೋನಾ ಅಟ್ಟಹಾಸ! ಮತ್ತೆ ಲಾಕ್​ಡೌನ್​​!

masthmagaa.com:

ಕೊರೋನ ಹುಟ್ಟಿದ ಚೀನಾದಲ್ಲಿ ಕೊರೋನಾ ಭಯ ಇನ್ನೂ ಕಮ್ಮಿಯಾಗಿಲ್ಲ. ಚೀನಾದ ಘುಲ್ಜಾ ನಗರದಲ್ಲಿ ಮತ್ತೆ ಲಾಕ್ ಡೌನ್ ಜಾರಿ ಆಗಿದೆ. ಈ ನಗರ ಚೀನಾದ ವಿವಾದಿತ ಶಿಂಜಿಯಾಂಗ್ ಪ್ರಾಂತ್ಯದಲ್ಲಿ ಇದೆ. ಇದು ಉಗರ್ ಮುಸ್ಲಿಮರ ಮೇಲೆ ಚೀನಾದ ದಬ್ಬಾಳಿಕೆಗೆ ಕೂಖ್ಯಾತಿ ಪಡೆದಿರೋ ಪ್ರಾಂತ್ಯ. ಇಲ್ಲೀಗ ಲಾಕ್ ಡೌನ್ ನಿಂದಾಗಿ ಜನ ಊಟಕ್ಕೂ ಪರದಾಡುವಂತಾ ಸ್ಥಿತಿ ನಿರ್ಮಾಣವಾಗಿದೆ ಅಂತ ‘ರೇಡಿಯೋ ಫ್ರೀ ಏಷಿಯಾ’ ವರದಿ ಮಾಡಿದೆ. ಯಾವ ಮಟ್ಟಿಗೆ ಲಾಕ್ಡೌನ್ ಅಂದ್ರೆ ಘುಲ್ಜಾ ನಗರದ ನಿವಾಸಿಗಳ ಮನೆಗಳನ್ನ ಅತ್ಯಂತ ಕ್ರೂರವಾಗಿ ಹೊರಗಿನಿಂದ ಲಾಕ್ ಮಾಡಿ ಹೋಗಿದ್ದಾರೆ ಅಧಿಕಾರಿಗಳು. ಹೀಗಾಗಿ ಒಂದು ವಾರದಿಂದ ಮನೆಯೊಳಗೇ ಲಾಕ್ ಆಗಿ ದಿಕ್ಕು ತೋಚದಂತಾಗಿದ್ದಾರೆ ಜನ. ಹೊರಗೋಗಿ ಅಗತ್ಯ ವಸ್ತುಗಳನ್ನ ತರೋಕು ಆಗ್ತಿಲ್ಲ. ವಾರಗಳ ಹಿಂದಷ್ಟೇ ಚೀನಾದ ಫ್ಯುಜಿಯಾನ್ ಪ್ರಾಂತ್ಯದಲ್ಲೂ 150ಕ್ಕೂ ಅಧಿಕ ಕೊರೋನಾ ಕೇಸಸ್ ಬಂದಾಗ ಅಲ್ಲಿನ ಹಲವು ನಗರಗಳಲ್ಲಿ ಶಾಲೆಗಳನ್ನ ಬಂದ್ ಮಾಡಲಾಗಿತ್ತು ಅಂತ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

ನ್ಯೂಜಿಲ್ಯಾಂಡ್​​ನಲ್ಲಿ ನಿರಂತರವಾಗಿ ಕೊರೋನಾ ಜಾಸ್ತಿಯಾಗುತ್ತಲೇ ಇದೆ. ಇದೀಗ ಕಳೆದ 6 ವಾರಗಳಲ್ಲೇ ಇದೇ ಮೊದಲ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕೊರೋನಾ ಜಾಸ್ತಿಯಾಗಿದೆ. ಹೊಸದಾಗಿ 71 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಎಲ್ಲವೂ ಆಕ್ಲ್ಯಾಂಡ್​​ನಲ್ಲಿ ಪತ್ತೆಯಾಗಿದೆ. ಹೀಗಾಗಿ ಮುಂದಿನ ವಾರದಲ್ಲಿ ದೇಶದ ಅತಿದೊಡ್ಡ ನಗರವಾದ ಆಕ್ಲ್ಯಾಂಡ್​​ನಲ್ಲಿ ಲಾಕ್​ಡೌನ್​​ ನಿರ್ಬಂಧಗಳನ್ನು ವಿಸ್ತರಿಸುವ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply