ಭಾರತದ ಮತ್ತಿಬ್ಬರಲ್ಲಿ ಕೊರೋನಾ ಸೋಂಕು ಪತ್ತೆ..!

ದೆಹಲಿ: ಭಾರತದಲ್ಲಿ ಮತ್ತೆರಡು ಕೊರೋನಾವೈರಸ್ ಪ್ರಕರಣಗಳು ಬೆಳಕಿಗೆ ಬಂದಿವೆ. ದೆಹಲಿಯಲ್ಲಿ ಮತ್ತು ತೆಲಂಗಾಣದಲ್ಲಿ ತಲಾ ಒಬ್ಬೊಬ್ಬರಲ್ಲಿ ಕೊರೋನಾವೈರಸ್ ಸೋಂಕು ಪತ್ತೆಯಾಗಿದೆ. ಇಬ್ಬರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದೆಹಲಿ ಮೂಲದ ಸೋಂಕು ಪೀಡಿತ ವ್ಯಕ್ತಿ ಈ ಹಿಂದೆ ಇಟಲಿಗೆ ಭೇಟಿ ನೀಡಿ ಬಂದಿದ್ದರು. ಅದೇ ರೀತಿ ತೆಲಂಗಾಣ ಮೂಲದ ಸೋಂಕು ಪೀಡಿತ ದುಬೈಗೆ ಭೇಟಿ ನೀಡಿ ವಾಪಸ್ ಬಂದಿದ್ದರು ಅಂತ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಈವರೆಗೆ ಕೇರಳದಲ್ಲಿ ಮಾತ್ರವೇ ಕೊರೋನಾ ಸೋಂಕು ಪತ್ತೆಯಾಗಿತ್ತು. ಚೀನಾದಿಂದ ಕೇರಳಕ್ಕೆ ಮರಳಿದ್ದ ಮೂವರಲ್ಲಿ ಕೊರೋನಾ ಪತ್ತೆಯಾಗಿದ್ದು, ನಂತರದಲ್ಲಿ ಚಿಕಿತ್ಸೆ ನೀಡಿದ ಬಳಿಕ ಆರೋಗ್ಯವಂತರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದರು.

Contact Us for Advertisement

Leave a Reply