ನೋಯ್ಡಾದ ಶಾಲೆಯಲ್ಲಿ ಕೊರೋನಾ ಭೀತಿ.. ಆಗಿದ್ದೇನು ಗೊತ್ತಾ..?

ದೆಹಲಿ: ವಿದ್ಯಾರ್ಥಿಗಳಿಬ್ಬರ ತಂದೆಯಲ್ಲಿ ಕೊರೋನಾ ವೈರಸ್ ಪತ್ತೆಯಾದ ಹಿನ್ನೆಲೆ ದೆಹಲಿ ಸಮೀಪದ ನೋಯ್ಡಾದ ಖಾಸಗಿ ಶಾಲೆಯೊಂದು ಹೈಸ್ಕೂಲ್​ ಪರೀಕ್ಷೆಗಳನ್ನ ಮುಂದೂಡಿದ ಘಟನೆ ನಡೆದಿದೆ. ಕೊರೋನಾ ವೈರಸ್​ ಕಾಣಿಸಿಕೊಂಡ 45 ವರ್ಷದ ವ್ಯಕ್ತಿ ಪೂರ್ವ ದೆಹಲಿಯ ನಿವಾಸಿ ಎನ್ನಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ವೈರಸ್​ ಬೆಳಕಿಗೆ ಬಂದ ಮೊದಲ ಪ್ರಕರಣ ಇದಾಗಿದೆ.

ಕೊರೋನಾ ಸೋಂಕು ತಗುಲಿದ ವ್ಯಕ್ತಿಯು ಕಳೆದ ಶುಕ್ರವಾರ ಆಗ್ರಾ ಬಳಿ ಹುಟ್ಟುಹಬ್ಬದ ಪಾರ್ಟಿಯೊಂದನ್ನ ಆಯೋಜಿಸಿದ್ದ. ಪಾರ್ಟಿಗೆ 5 ಕುಟುಂಬಗಳ ಸದಸ್ಯರಿಗೆ ಆಹ್ವಾನ ನೀಡಲಾಗಿತ್ತು. ಪಾರ್ಟಿಗೆ ಹೋಗಿ ಬಂದಿದ್ದ 6 ಜನರಿಗೆ ಜ್ವರ ಕಾಣಿಸಿಕೊಂಡಿದ್ದು, ಅವರ ಸ್ಯಾಂಪಲ್​ಗಳನ್ನ ಕೊರೋನಾ ವೈರಸ್​ ಪರೀಕ್ಷೆಗಾಗಿ ಪುಣೆಯ ನ್ಯಾಷನಲ್ ಇನ್ಸ್​ಟಿಟ್ಯೂಟ್​ ಆಫ್ ವೈರಾಲಜಿಗೆ ರವಾನಿಸಲಾಗಿದೆ.

ಇನ್ನು ಜ್ವರ ಕಾಣಿಸಿಕೊಂಡ 6 ಜನರ ಜೊತೆ ಸಂಪರ್ಕಕ್ಕೆ ಬಂದಿರುವವರನ್ನ ಆರೋಗ್ಯ ಇಲಾಖೆ ಪತ್ತೆಹಚ್ಚುವ ಕೆಲಸ ಮಾಡುತ್ತಿದೆ. ಮತ್ತೊಂದುಕಡೆ ಕೆಲ ಪೋಷಕರು ವಿದ್ಯಾರ್ಥಿಗಳನ್ನ ಶಾಲೆಗೆ ಕಳಿಸಲು ಹಿಂದೇಟು ಹಾಕ್ತಿದ್ದಾರೆ. ಕೊರೋನಾ ಆತಂಕ ಹೆಚ್ಚಾದ ಹಿನ್ನೆಲೆ ಸ್ಥಳೀಯ ಆರೋಗ್ಯ ಅಧಿಕಾರಿಗಳು ಶಾಲಾ ಆವರಣವನ್ನ ಸ್ವಚ್ಛಗೊಳಿಸಿದ್ದಾರೆ.

 

Contact Us for Advertisement

Leave a Reply