ಕಡಿಮೆಯಾಗ್ತಿದೆ ಕೊರೋನಾ ರೋಗಿಗಳ ಸಂಖ್ಯೆ!

masthmagaa.com:

ದೇಶದಲ್ಲಿ ಕಳೆದ 24ಗಂಟೆಯಲ್ಲಿ 2.58 ಲಕ್ಷ ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ನಿನ್ನೆಗೆ ಹೋಲಿಸಿದ್ರೆ ಇವತ್ತು ಶೇಕಡ 5 ರಷ್ಟು ಕಡಿಮೆ ಕೊರೋನಾ ಕೇಸಸ್‌ ದಾಖಲಾಗಿದೆ. ಅಂದಹಾಗೆ ಇವತ್ತು 385 ಜನರು ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.

ಅಂದಹಾಗೆ ದೇಶದ ಪ್ರಮುಖ ರಾಜ್ಯಗಳಾದ ದೆಹಲಿ ಮತ್ತು ಮುಂಬೈನಲ್ಲೂ ಕೊರೋನಾ ಕೇಸಸ್‌ ಕಡಿಮೆ ಆಗ್ತ ಇದೆ. ಅಂದಹಾಗೆ ಮುಂಬೈಯಲ್ಲಿ ಜನವರಿ 7ರಂದು 20,971 ಜನರಿಗೆ ಕೊರೋನಾ ಸೋಂಕು ತಗುಲಿತ್ತು. ಇದು ಮುಂಬೈಯಲ್ಲಿ ಇಲ್ಲಿಯವರೆಗೆ ದಾಖಲಾದ ಅತೀ ಹೆಚ್ಚಿನ ಕೊರೋನಾ ಕೇಸಸ್‌ ಆಗಿತ್ತು. ಆದ್ರೆ ನಿನ್ನೆ ಹತ್ತು ಸಾವಿರಕ್ಕು ಕಡಿಮೆ ಕೊರೋನಾ ಕೇಸಸ್‌ ದಾಖಲಾಗಿತ್ತು. ಇನ್ನು ಡೆಲ್ಲಿಯಲ್ಲಿ ಜನವರಿ 13ರಂದು 28,867 ಜನರಿಗೆ ಕೊರೋನಾ ಸೋಂಕು ತಗುಲಿತ್ತು. ಇದು ಇಲ್ಲಿಯವರೆಗೆ ದಾಖಲಾದ ಅತಿ ಹೆಚ್ಚಿನ ಕೊರೋನಾ ಕೇಸಸ್‌ ಆಗಿತ್ತು. ಆದ್ರೆ ಸೋಮವಾರ ಈ ಕೇಸಸ್‌ 15 ಸಾವಿರಕ್ಕೆ ಇಳಿದಿದೆ.

-masthmagaa.com

Contact Us for Advertisement

Leave a Reply