ಕೊರೋನಾವೈರಸ್ ಇನ್ನೆಷ್ಟು ಮಂದಿಗೆ ಹರಡುತ್ತೆ..? ವಿಜ್ಞಾನಿಗಳು ಏನಂತಾರೆ..?

ಚೀನಾದ ವುಹಾನ್​​​ನಿಂದ ಶುರುವಾದ ಕೊರೋನಾವೈರಸ್ ನಿಯಂತ್ರಣಕ್ಕೆ ಬರೋ ಮಾತೇ ಕೇಳ್ತಿಲ್ಲ. ಈಗಾಗಲೇ ವಿಶ್ವದ 26 ದೇಶಗಳಿಗೆ ಈ ಮಹಾಮಾರಿ ಹರಡಿದ್ದು, 24,534 ಜನ ಸೋಂಕಿತರಾಗಿದ್ದಾರೆ. ಅದ್ರಲ್ಲಿ 24,324 ಜನ ಚೀನಾದವರೇ ಆಗಿದ್ದಾರೆ. ಈಗಾಗಲೇ ಈ ಭಯಾನಕ ರೋಗಕ್ಕೆ 492 ಜನ ಸಾವನ್ನಪ್ಪಿದ್ಧಾರೆ.

ಮೆಡಿಕಲ್ ಜರ್ನಲ್ ದಿ ಲ್ಯಾನ್ಸೆಟ್ ಪ್ರಕಾರ ಈ ವೈರಸ್ ಡಿಸೆಂಬರ್ 1ರಿಂದಲೇ ಶುರುವಾಗಿತ್ತು. ಒಬ್ಬ ವ್ಯಕ್ತಿಯಲ್ಲಿ ಈ ಸೋಂಕು ಕಂಡು ಬಂದಿತ್ತು. ಆದ್ರೆ ಚೀನಾ ಒಂದು ತಿಂಗಳವರೆಗೆ ಈ ಬಗ್ಗೆ ಬಹಿರಂಗಪಡಿಸಲಿಲ್ಲ. ಆದ್ರೆ ಒಂದು ತಿಂಗಳಲ್ಲಿ ಅಂದ್ರೆ ಡಿಸೆಂಬರ್ 31ರ ವೇಳೆಗೆ ಸೋಂಕಿತರ ಸಂಖ್ಯೆ 44ಕ್ಕೆ ಏರಿಕೆಯಾಗಿತ್ತು. ಡಿಸೆಂಬರ್ 1ರಿಂದ ಫೆಬ್ರವರಿ 5ರವರೆಗೆ ಅಂದ್ರೆ 67 ದಿನಗಳಲ್ಲಿ 26 ದೇಶಗಳಿಗೆ ಹರಡಿದ್ದು, 24,535 ಮಂದಿಗೆ ಈ ಸೋಂಕು ತಗುಲಿದೆ.

ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿರುವ ಕ್ವೀನ್ಸ್‌ಲ್ಯಾಂಡ್ ವಿಶ್ವವಿದ್ಯಾಲಯದ ವೈರಾಲಜಿಸ್ಟ್ ಇಯಾನ್ ಮೆಕೆ ಪ್ರಕಾರ ಕೊರೋನಾವೈರಸ್ ಈಗಾಗಲೇ ಚೀನಾದಿಂದ ಹೊರಗೂ ವ್ಯಾಪ್ತಿಸಿದ್ದು, 26 ದೇಶಗಳಲ್ಲಿ ಜನ ಸೋಂಕಿತರಾಗಿದ್ದಾರೆ. ಹೀಗಾಗಿ ಇದನ್ನು ತಡೆಗಟ್ಟಲು ತುಂಬಾ ಸಮಯ ಬೇಕಾಗುತ್ತೆ. ಒಂದು ವೇಳೆ ವಿಶ್ವದ ರಾಷ್ಟ್ರಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ 40ರಿಂದ 52 ಸಾವಿರ ಮಂದಿಗೆ ಈ ಸೋಂಕು ಹರಡಬಹುದು ಎಂದಿದ್ದಾರೆ. ಅಮೆರಿಕ, ಇಟಲಿ ಮತ್ತು ಚೀನಾದ ವಿಜ್ಞಾನಿಗಳು ಸೇರಿ ಈ ವರದಿ ಸಿದ್ಧಪಡಿಸಿದ್ದಾರೆ.

Contact Us for Advertisement

Leave a Reply