ಕೊರೋನಾ 3ನೇ ಹಂತಕ್ಕೆ ಬಂದ್ರೆ ಕಷ್ಟ: ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

masthmagaa.com:

ದೆಹಲಿ: ನಿನ್ನೆಯಷ್ಟೇ ಕೊರೋನಾ ವೈರಸ್ ಭಾರತದಲ್ಲಿ 3ನೇ ಹಂತಕ್ಕೆ ಹೋಗಿಲ್ಲ ಅನ್ನೋ ಸಮಾಧಾನ ಸುದ್ದಿ ಬಂದಿತ್ತು. ಆದ್ರೆ ಇವತ್ತು ವಿಶ್ವ ಆರೋಗ್ಯ ಸಂಸ್ಥೆ ಭಾರತಕ್ಕೆ ಎಚ್ಚರಿಕೆ ನೀಡಿದೆ. ಸದ್ಯ ಭಾರತದಲ್ಲಿ ಕೊರೋನಾ ವೈರಸ್ 2ನೇ ಹಂತದಲ್ಲಿ ಇರಬಹುದು. ಆದ್ರೆ ಪರಿಸ್ಥಿತಿಯನ್ನು ಸುಧಾರಿಸುವತ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಕೊರೋನಾ ವೈರಸ್ 3ನೇ ಹಂತಕ್ಕೆ ತಲುಪಲಿದೆ ಅಂತ ವಾರ್ನಿಂಗ್ ಕೊಟ್ಟಿದೆ.

ಒಂದ್ವೇಳೆ ಕೊರೋನಾ 3ನೇ ಹಂತಕ್ಕೆ ಹೋದಲ್ಲಿ ಅದನ್ನು ನಿಯಂತ್ರಿಸೋದು ತುಂಬಾ ಕಷ್ಟ.. ಯಾಕಂದ್ರೆ ಭಾರತ 130 ಕೋಟಿಗೂ ಹೆಚ್ಚು ಜನರಿರುವ ದೇಶ.. ಹೀಗಾಗಿ 3ನೇ ಹಂತಕ್ಕೆ ಹೋದ್ರೆ ಭಾರಿ ಪ್ರಮಾಣದಲ್ಲಿ ಸೋಂಕು ಹರಡೋ ಸಾಧ್ಯತೆ ಇರುತ್ತೆ. ಸದ್ಯ ಸೋಂಕು ಸ್ಥಳೀಯ ಮಟ್ಟದಲ್ಲಿದೆ. ಅಂದ್ರೆ ಒಬ್ಬ ವ್ಯಕ್ತಿಗೆ ಸೋಂಕು ಇದೆ ಎಂದು ತಿಳಿದಾಗ ಆತ ಅದೇ ಭೌಗೋಳಿಕ ಪ್ರದೇಶಲ್ಲಿ ಸಿಕ್ಕರೆ ಅದು ಸ್ಥಳೀಯ ಮಟ್ಟದ ಸೋಂಕು..ಅಂದ್ರೆ 2ನೇ ಹಂತ…

ಅದೇ ಆ ವ್ಯಕ್ತಿ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿದರೆ ಸಮುದಾಯ ಮಟ್ಟದಲ್ಲಿ ಸೋಂಕು ಹರಡುವ ಭೀತಿ ಇರುತ್ತೆ. ಇದನ್ನೇ 3ನೇ ಹಂತ ಎಂದು ಹೇಳಲಾಗುತ್ತೆ.

ಇತ್ತೀಚೆಗಷ್ಟೇ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್​​​ ಸೆಂಟರ್​​ನ ವಿಜ್ಞಾನಿ ಬಲರಾಮ್ ಭಾರ್ಗವ್​​, ಭಾರತದಲ್ಲಿ 30 ದಿನಗಳಲ್ಲಿ ಕೊರೋನಾ ಸೋಂಕು ನಿಯಂತ್ರಿಸದಿದ್ದರೆ 3ನೇ ಹಂತಕ್ಕೆ ಹೋಗುತ್ತೆ ಎಂದು ಎಚ್ಚರಿಸಿದ್ದರು. ಈ ನಡುವೆ ಐಸಿಎಂಆರ್​​ನ ಮಾಜಿ ಮುಖ್ಯಸ್ಥರಾದ ಡಾ.ಜೇಕಬ್ ಜಾನ್​​​​​​, ಭಾರತ ಮುಂದಿನ ದಿನಗಳಲ್ಲಿ ಕೊರೋನಾ ವೈರಸ್​​​ನ ಕೇಂದ್ರ ಬಿಂದುವಾಗಲಿದೆ ಎಂದು ಎಚ್ಚರಿಸಿದ್ದರು.

-masthmagaa.com

Contact Us for Advertisement

Leave a Reply