ಭಾರತಕ್ಕೆ ಸಹಾಯಗಳ ಸರಣಿಯನ್ನೇ ಕಳಿಸುತ್ತಿದ್ದೇವೆ: ಬೈಡೆನ್ ಘೋಷಣೆ

masthmagaa.com:

ಕೊರೋನಾ ಮಹಾಮಾರಿಯ ಆರಂಭದಲ್ಲಿ ಅಮೆರಿಕಕ್ಕೆ ಸಹಾಯ ಮಾಡಿದ ಭಾರತಕ್ಕೀಗ ಅಮೆರಿಕ ಸಹಾಯಗಳ ಇಡೀ ಸರಣಿಯನ್ನೇ ಕಳಿಸುತ್ತಿದೆ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಹೇಳಿದ್ದಾರೆ. ಕಾಯಿಲೆಯನ್ನ ಕಂಟ್ರೋಲ್ ಮಾಡಲು ಭಾರತಕ್ಕೆ ಬೇಕಾದ ರೆಮ್ಡೆಸಿವಿರ್ ಔಷಧಿ ಮತ್ತು ಇತರೆ ಔಷಧಿಗಳನ್ನ ಕಳಿಸುತ್ತಿದ್ದೇವೆ.. ಕೊರೋನಾ ಲಸಿಕೆಯನ್ನ ಅಭಿವೃದ್ಧಿಪಡಿಸಲು ಬೇಕಾದ ಮೆಕಾನಿಕಲ್ ಪಾರ್ಟ್​​ಗಳನ್ನ ಕಳಿಸುತ್ತಿದ್ದೇವೆ. ಭಾರತಕ್ಕೆ ಕೊರೋನಾ ಲಸಿಕೆಯನ್ನ ಕೂಡ ಕಳಿಸಬೇಕು ಅನ್ನೋದು ನನ್ನ ಉದ್ದೇಶ. ಹೀಗಾಗಿ ಯಾವಾಗ ಲಸಿಕೆ ಕಳಿಸಬೇಕು ಅನ್ನೋ ಬಗ್ಗೆಯೂ ಪ್ರಧಾನಿ ಮೋದಿ ಜೊತೆ ಮಾತನಾಡಿದ್ದೇನೆ ಅಂತ ಜೋ ಬೈಡೆನ್ ಹೇಳಿದ್ದಾರೆ. ಭಾರತದಲ್ಲಿ ಕೋವಿಶೀಲ್ಡ್​ ಲಸಿಕೆ ಉತ್ಪಾದನೆಗೆ ಬೇಕಾದ ಕಚ್ಚಾವಸ್ತುವನ್ನ ಕಳಿಸಲು ಅಮೆರಿಕ ಇತ್ತೀಚೆಗೆ ಒಪ್ಪಿಗೆ ನೀಡಿತ್ತು. ಅದರ ಬೆನ್ನಲ್ಲೇ ಬೈಡೆನ್ ಮತ್ತು ಪ್ರಧಾನಿ ಮೋದಿ ದೂರವಾಣಿ ಮೂಲಕ ಮಾತನಾಡಿದ್ರು. ಈ ವೇಳೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತದ ಬೆಂಬಲಕ್ಕೆ ಅಮೆರಿಕ ನಿಲ್ಲೊದಾಗಿ ಬೈಡೆನ್ ಹೇಳಿದ್ದರು. ಇದೀಗ ಭಾರತಕ್ಕೆ ಸಹಾಯಗಳ ಸರಣಿಯನ್ನೇ ಕಳಿಸುತ್ತಿದ್ದೇವೆ ಅಂತ ಬೈಡೆನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply