ವಿಶ್ವ ಆರೋಗ್ಯ ಸಂಸ್ಥೆಗೆ ಇನ್ಮುಂದೆ ದುಡ್ಡು ಕೊಡಲ್ಲ: ಟ್ರಂಪ್ ಘೋಷಣೆ

masthmagaa.com:

ಚೀನಾದಲ್ಲಿ ಶುರುವಾದ ಕೊರೋನಾ ವೈರಸ್ ಈಗ ಅಮೆರಿಕದಲ್ಲಿ ಮರಣ ಮೃದಂಗ ಬಾರಿಸುತ್ತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ ಮೇಲೆ ಕೋಪಗೊಂಡಿರುವ ಅಮೆರಿಕ, ಇನ್ಮುಂದೆ ಹಣ ನೀಡುವುದಿಲ್ಲ ಎಂದು ಘೋಷಿಸಿದೆ.

ಅಮೆರಿಕದಲ್ಲಿ ಈಗಾಗಲೇ 6 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 26 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಆದ್ರೆ ಈ ರೋಗ ಹರಡುವಿಕೆಯನ್ನು ತಡೆಯುವಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಯಶಸ್ವಿಯಾಗಿಲ್ಲವಾದ್ದರಿಂದ ಅಮೆರಿಕ ಕೋಪಗೊಂಡಿದೆ. ಅಲ್ಲದೆ ಇತ್ತೀಚೆಗಷ್ಟೇ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರವಾಗಿದೆ ಎಂದು ಆರೋಪಿಸಿ, ಇನ್ಮುಂದೆ ಹಣ ನೀಡೋದಿಲ್ಲ ಎಂದು ಬೆದರಿಸಿದ್ದರು. ಈಗ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಫಂಡಿಂಗ್ ನಿಲ್ಲಿಸೋದಾಗಿ ಘೋಷಣೆ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply