ಎಟಿಎಂಗಳಲ್ಲಿ ಸ್ಯಾನಿಟೈಸರ್ ಇಟ್ರೆ ಈ ಜನ ಬಿಡ್ತಾರಾ..? ವಿಡಿಯೋ ನೋಡಿ…

-masthmagaa.com:

ಕೊರೋನಾ ವೈರಸ್ ವಿಶ್ವವನ್ನೇ ಕಾಡುತ್ತಿದ್ದು, ಜನ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ತಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿಕೊಳ್ಳೋದು, ಸೋಪಿನಿಂದ ಕೈ ತೊಳೆಯೋದು, ಹ್ಯಾಂಡ್ ಸ್ಯಾನಿಟೈಸರ್ ಬಳಸೋದು…ಹೀಗೆ ಎಲ್ಲಾ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ತಿದ್ದಾರೆ. ಆದ್ರೆ ಈ ನಡುವೆ ಹ್ಯಾಂಡ್ ಸ್ಯಾನಿಟೈಸರ್ ಕೊರತೆ ಎದುರಾಗಿದ್ದು, ಜನ ಕಳ್ಳತನಕ್ಕೆ ಇಳಿದಿದ್ದಾರೆ.

ಪಾಕಿಸ್ತಾನದ ಪತ್ರಕರ್ತೆ ನೈನಾ ಇನಾಯತ್ ಎಂಬುವವರು ಒಂದು ವಿಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ಎಟಿಎಂಗೆ ಬರುವ ವ್ಯಕ್ತಿ ಮೊದಲಿಗೆ ದುಡ್ಡು ತೆಗೆದು ಜೇಬಿನಲ್ಲಿ ಇಟ್ಟುಕೊಳ್ಳುತ್ತಾನೆ. ನಂತರ ಪಕ್ಕದಲ್ಲಿದ್ದ ಹ್ಯಾಂಡ್ ಸ್ಯಾನಿಟೈಸರ್​​ನಿಂದ ಕೈ ಶುದ್ಧ ಮಾಡಿಕೊಳ್ಳುವ ಬದಲು, ಇಡೀ ಬಾಟಲ್​​ನ್ನೇ ಜಾಕೆಟ್ ಒಳಗೆ ಇಟ್ಟುಕೊಂಡು ಎಸ್ಕೇಪ್ ಆಗಿದ್ದಾನೆ.

ಇದಕ್ಕೆ ಪ್ರತಿಯಾಗಿ ವ್ಯಕ್ತಿಯೊಬ್ಬರು ಭಾರತದ ವಿಡಿಯೋವೊಂದನ್ನು ಶೇರ್ ಮಾಡಿದ್ದರು, ಅದರಲ್ಲೂ ಕೂಡ ವ್ಯಕ್ತಿಯೊಬ್ಬ ಎಟಿಎಂನಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಾಟಲಿಯನ್ನು ಜೇಬಿನಲ್ಲಿಟ್ಟುಕೊಂಡು ಹೋಗಿದ್ದಾನೆ.

-masthmagaa.com

Contact Us for Advertisement

Leave a Reply